ಕೊಡಗು:ವಿರಾಜಪೇಟೆ ತಾಲೂಕಿನ ಹೊಸ್ಕೇರಿ ಗ್ರಾಮದ ಸುಬ್ಬಯ್ಯ ಅವರ ಮನೆಯಲ್ಲಿ ಜೂನ್ 12 ರಂದು ಬೀರುವಿನಲ್ಲಿದ್ದ 9 ರಿಂದ 10 ಲಕ್ಷ ಮೌಲ್ಯದ ಆಭರಣಗಳು ಕಳ್ಳತನವಾಗಿದ್ದವು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗಾಗಿ ಹುಡುಕಾಟ ಆರಂಭಿಸಿದ್ದರು. ಸಿಸಿಟಿವಿ ಆಧಾರದ ಮೇಲೆ ಕಳ್ಳತನ ಮಾಡಿದ ಅಸ್ಸೋಂ ಮೂಲದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು ಇನ್ನಿಬ್ಬರು ತಲೆಮರೆಸಿಕೊಂಡಿದ್ದಾರೆ.
ವಲಸೆ ಕಾರ್ಮಿಕರಿಂದ ಹೆಚ್ಚಾಗುತ್ತಿದೆ ಅಪರಾಧ ಪ್ರಕರಣ ಕುರ್ಬನ್ ಆಲಿ ಮತ್ತು ಮಹಿರುದ್ದೀನ್ ಆಲಿ ಬಂಧಿತ ಆರೋಪಿಗಳು. ಬಂಧಿತರಿಂದ 11,70,000 ರೂಪಾಯಿ ಮೌಲ್ಯದ 247.1 ಗ್ರಾಂ ಚಿನ್ನಾಭರಣ ಹಾಗೂ ಪೀಚೆಕತ್ತಿಯನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತರಿಂದ 11,70,000 ರೂ. ಮೌಲ್ಯದ ಚಿನ್ನಾಭರಣ ವಶ ಕೊಡಗಿನಲ್ಲಿ ದಿನೇ ದಿನೇ ಕಳ್ಳತನ ಪ್ರಕರಣಗಳು ಏರಿಕೆಯಾಗುತ್ತಿವೆ. ಈ ಪ್ರಕರಣಗಳಲ್ಲಿ ಅಸ್ಸೋಂ ಮೂಲದವರೇ ಹೆಚ್ಚಾಗಿ ಸಿಕ್ಕಿಬೀಳುತ್ತಿದ್ದಾರೆ. ಈ ವಲಸೆ ಕಾರ್ಮಿಕರನ್ನು ಕಾಫಿ ತೋಟದ ಕೃಷಿ ಕೆಲಸಕ್ಕಾಗಿ ಕರೆಸಲಾಗುತ್ತದೆ. ಆದರೆ ಅವರು ಈ ರೀತಿಯ ಕೃತ್ಯಗಳನ್ನು ಎಸಗುತ್ತಿದ್ದಾರೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣಗಳು ಇನ್ನಷ್ಟು ಗಂಭೀರವಾಗುವ ಮೊದಲು ಕಾಫಿ ತೋಟದ ಮಾಲೀಕರು ಮತ್ತು ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಿದೆ.
ಇದನ್ನೂ ಓದಿ:ಜೈಲು ಶಿಕ್ಷೆ ಪೂರ್ಣಗೊಳಿಸಿ ಬಂದ್ರು ಮತ್ತದೇ ಕೃತ್ಯ.. ನಾಲ್ವರು ಚಾಲಾಕಿ ಕಳ್ಳರು ಅಂದರ್