ಮಡಿಕೇರಿ (ಕೊಡಗು) :ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಸೋಂಕಿತರ ಸಂಪರ್ಕದಲ್ಲಿದ್ದ ಪ್ರಮುಖ ಪ್ರದೇಶಗಳನ್ನು ಜಿಲ್ಲಾಡಳಿತ ಸೀಲ್‌ಡೌನ್ ಮಾಡಿದೆ.
ಜಿಲ್ಲೆಯಲ್ಲಿ ನಿನ್ನೆ ವೈದ್ಯರೊಬ್ಬರು ಸೇರಿ ನರ್ಸ್‌ಗಳಲ್ಲೂ ಕೊರೊನಾ ದೃಢಪಟ್ಟಿದೆ. ಹೀಗಾಗಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸೋಂಕಿತರು ಓಡಾಡಿದ್ದ ಸ್ಥಳಗಳನ್ನು ಸೇರಿಸಿ ಅವರ ಸಂಪರ್ಕದಲ್ಲಿರುವ ಮಡಿಕೇರಿ ತಾಲೂಕಿನ ತಾಳತ್ ಮನೆ , ಕಗ್ಗೋಡ್ಲು, ಬಿಟ್ಟಂಗಾಲ, ಡೈರಿ ಫಾರಂ ಹಾಗೂ ಪುಟಾಣಿ ನಗರಗಳನ್ನು ಸೀಲ್‌ಡೌನ್ ಮಾಡಿದೆ.