ಕರ್ನಾಟಕ

karnataka

ETV Bharat / state

ಬೀಟೆ ನಾಟ ಸಾಗಾಟ ಯತ್ನ: ಕುಶಾಲನಗರದಲ್ಲಿ ಆರೋಪಿಗಳು ಪರಾರಿ - ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ

ಅಕ್ರಮವಾಗಿ ಬೀಟೆ ನಾಟ ಸಾಗಾಟಕ್ಕೆ ಯತ್ನಿಸುತ್ತಿದ್ದ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ನಡೆಸಿ, ಮಾಲು ಸಮೇತ ಮೂರು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

Beet tree
Beet tree

By

Published : Oct 15, 2020, 10:07 AM IST

ಮಡಿಕೇರಿ/ಸೋಮವಾರಪೇಟೆ: ಕಾಫಿ ತೋಟದಲ್ಲಿ‌ ಅಕ್ರಮವಾಗಿ ಬೀಟೆ ನಾಟ ಸಾಗಾಟಕ್ಕೆ ಯತ್ನಿಸುತ್ತಿದ್ದ ಆರೋಪಿಗಳು ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ವೇಳೆ ಪರಾರಿಯಾಗಿರುವ ಘಟನೆ ಕುಶಾಲನಗರದ ಕೊಡಗರಹಳ್ಳಿ ಬಳಿ ನಡೆದಿದೆ.

ಕುಶಾಲನಗರದ ಸಾಮಿಲ್‌ವೊಂದರ‌ ಮಾಲೀಕನ ಮಗ ಸೇರಿದಂತೆ ಆತನ 6 ಜನ ಸಹಚರರು ಮುಂಜಾನೆ ಸುಂಟಿಕೊಪ್ಪ ಸಮೀಪದ ಕೊಡಗರಹಳ್ಳಿಯ ದೀಪಕ್ ಎಂಬುವರ ತೋಟದಲ್ಲಿ ಮಳೆ, ಗಾಳಿಗೆ ಬಿದ್ದಿದ್ದ ಬೀಟೆ ಮರವನ್ನು ಕತ್ತರಿಸಿ ಟಿಪ್ಪರ್‌ಗೆ ತುಂಬಲು ಯತ್ನಿಸುತ್ತಿದ್ದರು.

ಈ ಕುರಿತು ಖಚಿತ ಮಾಹಿತಿ ಮೇರೆಗೆ ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್, ಸೋಮವಾರಪೇಟೆ ಎಸಿಎಫ್ ನೆಹರು, ವಲಯ ಅರಣ್ಯಾಧಿಕಾರಿ ಅನನ್ಯ ಕುಮಾರ್ ಅವರ ಸೂಚನೆಯಂತೆ ಆನೆಕಾಡು ಶಾಖೆ ಉಪವಲಯ ಅರಣ್ಯಾಧಿಕಾರಿ ಮಹದೇವ್ ನಾಯಕ್ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದು, ನಾಟ ಜೊತೆಗೆ 3 ವಾಹನಗಳನ್ನು ವಶಕ್ಕೆಪಡೆದುಕೊಂಡಿದ್ದಾರೆ.

ಈ ಕುರಿತು ಆರೋಪಿಗಳ ವಿರುದ್ಧ ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details