ಮಡಿಕೇರಿ(ಕೊಡಗು): ಜಿಲ್ಲೆಯ ನಂಜರಾಯಪಟ್ಟಣದಲ್ಲಿ ಅಕ್ರಮ ಬೀಟೆ ನಾಟಗಳನ್ನು ಸಾಗಿಸುತ್ತಿದ್ದ ವೇಳೆ ಮಿಂಚಿನ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ನಾಟದೊಂದಿಗೆ ಪಿಕ್‌ಅಪ್ ಜೀಪನ್ನು ವಶಪಡಿಸಿಕೊಂಡಿದ್ದಾರೆ.
ಅಕ್ರಮವಾಗಿ ಬೀಟೆ ನಾಟ ಸಾಗಣೆ: ಗದ್ದೆಯಲ್ಲಿ ಜೀಪ್ ನಿಲ್ಲಿಸಿ ಕಾಲ್ಕಿತ್ತ ಆರೋಪಿ - Forest Department
ನಂಜರಾಯಪಟ್ಟಣದಲ್ಲಿ ಅಕ್ರಮ ಬೀಟೆ ನಾಟಗಳನ್ನು ಸಾಗಿಸುತ್ತಿದ್ದ ವೇಳೆ ಮಿಂಚಿನ ಕಾರ್ಯಾಚರಣೆ ನಡೆಸಿದ ಕೊಡಗು ಅರಣ್ಯ ಇಲಾಖೆ ಅಧಿಕಾರಿಗಳು ನಾಟದೊಂದಿಗೆ ಪಿಕ್‌ಅಪ್ ಜೀಪನ್ನು ವಶಪಡಿಸಿಕೊಂಡಿದ್ದಾರೆ.
ಅಕ್ರಮ ಬೀಟೆ ನಾಟ ಸಾಗಾಟ
ಸಿದ್ದಾಪುರದಿಂದ ನಂಜರಾಯ ಪಟ್ಟಣದ ಮೂಲಕ ಕುಶಾಲನಗರಕ್ಕೆ ತೆರಳುತ್ತಿದ್ದ ಜೀಪ್‌ನಲ್ಲಿ ಅಕ್ರಮವಾಗಿ ಬೀಟೆ ಮರದ ನಾಟಗಳನ್ನು ಸಾಗಿಸಲಾಗುತ್ತಿದೆ ಎಂದು ಅಧಿಕಾರಿಗಳಿಗೆ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನಲೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಜೀಪನ್ನು ಹಿಂಬಾಲಿಸಿದ್ದರು.
ವಿಷಯ ತಿಳಿದ ಆರೋಪಿ ಜೀಪನ್ನು ಅತೀ ವೇಗವಾಗಿ ಚಾಲನೆ ಮಾಡಿ ದುಬಾರೆ ಗದ್ದೆಯಲ್ಲಿ ನಿಲ್ಲಿಸಿ ಅಲ್ಲಿಂದ ಪರಾರಿಯಾಗಿದ್ದಾನೆ. ಸದ್ಯ ಜೀಪು ಹಾಗೂ 1.50 ಲಕ್ಷ ಮೌಲ್ಯದ ಮರದ ನಾಟಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.