ಕರ್ನಾಟಕ

karnataka

ETV Bharat / state

ಕೊಡಗಿನ ಹೋಂ ಸ್ಟೇನಲ್ಲಿ ಅನೈತಿಕ ಚಟುವಟಿಕೆ: ಇಬ್ಬರು ಯುವತಿಯರು ಸೇರಿ 7 ಜನ ವಶಕ್ಕೆ - Illegal activities in madikeri home stay

ಮಡಿಕೇರಿ-ವಿರಾಜಪೇಟೆ ರಸ್ತೆಯಲ್ಲಿನ ಹೋಂ ಸ್ಟೇವೊಂದರಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿರುವುದನ್ನ ಪತ್ತೆ ಹಚ್ಚಿದ ಪೊಲೀಸರು, ದಾಳಿ ನಡೆಸಿ 7 ಜನರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

7 ಜನರ ಬಂಧನ

By

Published : Oct 14, 2019, 10:33 AM IST

ಕೊಡಗು:ಅನೈತಿಕ ಚಟುವಟಿಕೆ ನಡೆಸುತ್ತಿದ್ದ ಹೋಂ ಸ್ಟೇ ಮೇಲೆ ಪೊಲೀಸರು ದಿಢೀರ್ ದಾಳಿ ನಡೆಸಿ 7 ಮಂದಿಯನ್ನು ವಶಕ್ಕೆ ಪಡೆದಿರುವ ಘಟನೆ ಮಡಿಕೇರಿ ತಾಲೂಕಿನ ‌ಮೂರ್ನಾಡು ಬಳಿ ನಡೆದಿದೆ.

ಕೇರಳ ಮೂಲದ‌ ನಾಲ್ವರು ಯುವಕರು ಹಾಗೂ ಇಬ್ಬರು ಯುವತಿಯರನ್ನು ವಶಕ್ಕೆ ಪಡೆಯಲಾಗಿದ್ದು, ಮಡಿಕೇರಿ-ವಿರಾಜಪೇಟೆ ರಸ್ತೆಯ ಭೀಮಯ್ಯ ಎಂಬುವರಿಗೆ ಸೇರಿದ ಭವಾನಿ ಹೋಂ ಸ್ಟೇ‌ನಲ್ಲಿ ಘಟನೆ ನಡೆದಿದೆ. ಹೋಂ‌ ಸ್ಟೇ ಮಾಲೀಕನನ್ನೂ ಸಹ ಬಂಧಿಸಲಾಗಿದೆ.

ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೋಂ ಸ್ಟೇಗಳ ಬಗ್ಗೆ ಕೊಡಗು ಪೊಲೀಸರು ತೀವ್ರ ನಿಗಾ ವಹಿಸಿದ್ದಾರೆ ಎನ್ನಲಾಗಿದೆ.

ABOUT THE AUTHOR

...view details