ಕರ್ನಾಟಕ

karnataka

ETV Bharat / state

ಜೀವಬೆದರಿಕೆ ಹಾಕಿ ಮನೆ ದರೋಡೆ ಮಾಡಿದ ಖದೀಮರು! - ವಿರಾಜಪೇಟೆಯಲ್ಲಿ ಮನೆ ದರೋಡೆ

ವಿರಾಜಪೇಟೆಯಲ್ಲಿ ಮನೆಯವರಿಗೆ ಜೀವಬೆದರಿಕೆಯೊಡ್ಡಿ ಮನೆ ದರೋಡೆ ಮಾಡಲಾಗಿದೆ. ಮನೆಯಲ್ಲಿದ್ದ ಮೂವರಿಗೆ ಗದ್ದಲ ಮಾಡದಂತೆ ಬೆದರಿಸಿ ಅವರ ಬಾಯಿಗೆ ಪ್ಲಾಸ್ಟರ್ ಹಾಕಿ ಚಾಕು ತೋರಿಸಿ ಕಳ್ಳತನ ಮಾಡಿದ್ದಾರೆ.

Home robbery in Virajpet
ಪ್ರಾಣ ಬೆದರಿಕೆ ಹಾಕಿ ಮನೆ ದರೋಡೆ ಮಾಡಿದ ಖದೀಮರು

By

Published : May 22, 2020, 11:25 AM IST

ವಿರಾಜಪೇಟೆ(ಕೊಡಗು): ಮನೆಯವರಿಗೆ ಪ್ರಾಣ ಬೆದರಿಕೆಯೊಡ್ಡಿ ಮನೆ ದರೋಡೆ ಮಾಡಿರುವ ಘಟನೆ ‌ವಿರಾಜಪೇಟೆ ಪಟ್ಟಣದಲ್ಲಿ ನಡೆದಿದೆ.‌ ಗೋಣಿಕೊಪ್ಪ ರಸ್ತೆಯಲ್ಲಿರುವ ಕರಿಮೆಣಸು ಉದ್ಯಮಿ ಶಬ್ಬೀರ್ ಅಹ್ಮದ್ ಎಂಬುವರ ಮನೆಯಲ್ಲಿ ದರೋಡೆಯಾಗಿದೆ.

ಅಡುಗೆ ಮನೆಯ ಕಿಟಕಿಯ ಸರಳನ್ನು ಕತ್ತರಿಸಿ ತಡರಾತ್ರಿ 2.30ರ ವೇಳೆಗೆ ದರೋಡೆ‌ಕೋರರು ಮನೆಯ ಒಳ ನುಗ್ಗಿದ್ದಾರೆ. ಮನೆಯಲ್ಲಿದ್ದ ಮೂವರಿಗೆ ಗದ್ದಲ ಮಾಡದಂತೆ ಬೆದರಿಸಿ, ಅವರ ಬಾಯಿಗೆ ಪ್ಲಾಸ್ಟರ್ ಹಾಕಿ ಚಾಕು ತೋರಿಸಿ ಬೆದರಿಸಿದ್ದಾರೆ. ಇದರಿದಾಗಿ ಮನೆಯವರು ಪ್ರಾಣ ಉಳಿಸಿ, ಬೇಕಾದ್ದನ್ನು ತೆಗೆದುಕೊಂಡು ಹೋಗುವಂತೆ ಅಂಗಲಾಚಿದ್ದಾರೆ.‌

ಪ್ರಾಣ ಬೆದರಿಕೆ ಹಾಕಿ ಮನೆ ದರೋಡೆ ಮಾಡಿದ ಖದೀಮರು

ಇನ್ನು ಪ್ಲಾಸ್ಟರ್ ಹಾಕುವಾಗ ಚಿಕ್ಕ ಪುಟ್ಟ ಗಾಯಗಾಳಾಗಿದ್ದು, ಮೂವರನ್ನು ವಿರಾಜಪೇಟೆಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪನ್ನೇಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ವಿರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.‌

ABOUT THE AUTHOR

...view details