ಕೊಡಗು :ಮಡಿಕೇರಿ ತಾಲೂಕಿನ ಭಾಗಮಂಡಲದಲ್ಲಿ ನಿರ್ಮಾಣಗೊಂಡಿರುವ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ಹೈಟೆಕ್ ಕಟ್ಟಡವನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟನೆ ಮಾಡಿದರು.
ಸುಮಾರು 50 ಎಕರೆ ಪ್ರದೇಶದಲ್ಲಿ 19 ಕೋಟಿ 60 ಲಕ್ಷ ರೂ. ವೆಚ್ಚದಲ್ಲಿ ಅತ್ಯಾಧುನಿಕವಾಗಿ ಈ ವಸತಿ ಶಾಲೆಯನ್ನು ನಿರ್ಮಾಣ ಮಾಡಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳ 300 ವಿದ್ಯಾರ್ಥಿಗಳು ಶಾಲೆಯಲ್ಲಿ ಅಧ್ಯಯನ ಮಾಡುತ್ತಿದ್ದಾರೆ.
ಭಾಗಮಂಡಲದಲ್ಲಿ ಹೈಟೆಕ್ ವಸತಿ ಶಾಲಾ ಕಟ್ಟಡ ಉದ್ಘಾಟನೆ ಓದಿ : ದೇವಸ್ಥಾನಕ್ಕೆಂದು ಮೀಸಲಿಟ್ಟಿದ್ದ ಹಣ ಜ್ಞಾನ ದೇಗುಲಕ್ಕೆ...ಸರ್ಕಾರಿ ಶಾಲೆಗೆ 'ಪುನರ್ಜನ್ಮ'!
ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗಾಗಿ ನಿರ್ಮಾವಾಗಿರುವ ಅಟಲ್ ಬಿಹಾರಿ ವಾಜಪೇಯಿ ಶಾಲೆಯ ನೂತನ ಕಟ್ಟ ಇತರ ಶಾಲೆಗಳಿಗಿಂತ ವಿಭಿನ್ನವಾಗಿದೆ. ನೂತನ ವಸತಿ ಶಾಲೆಯಲ್ಲಿ ಬಾಲಕ ಮತ್ತು ಬಾಲಕಿಯರಿಗೆ ಸುಸಜ್ಜಿತವಾದ ಬೋಧನಾ ಕೊಠಡಿಗಳು, ಸೈನ್ಸ್ ಲ್ಯಾಬ್ , ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ, ವಿಶಾಲವಾದ ಡೈನಿಂಗ್ ಹಾಲ್, ಬೋಧಕ ಸಿಬ್ಬಂದಿಗೆ ವಸತಿಗೃಹಗಳು ಹೀಗೆ ಸಕಲ ಸೌಲಭ್ಯಗಳು ಇವೆ.