ಕೊಡಗು: ನಿರಂತರ ಪ್ರವಾಹ ಹಾಗೂ ಲಾಕ್‌ಡೌನ್‌ನಿಂದ ಮಂಕಾಗಿರುವ ಪ್ರವಾಸೋದ್ಯಮ ಉತ್ತೇಜಿಸುವ ಉದ್ದೇಶದಿಂದ ಪ್ರವಾಸೋದ್ಯಮ ಇಲಾಖೆ ಖಾಸಗಿ ಸಂಸ್ಥೆಯ ಸಹಭಾಗಿತ್ವದಲ್ಲಿ ಕೆಲವು ದಿನಗಳು ಜಿಲ್ಲೆಯಲ್ಲಿ ಹೆಲಿಟೂರಿಸಂ ಪ್ರಾರಂಭಿಸಿದೆ.
ಪ್ರವಾಸೋದ್ಯಮ ಚೇತರಿಕೆಗೆ ಕೊಡಗಿನಲ್ಲಿ ಒಂದು ವಾರ ಹೆಲಿಟೂರಿಸಂ ಪ್ರಾರಂಭ..! - ಜನವರಿ 1 ವರೆಗೆ ಹೆಲಿಕಾಪ್ಟರ್ ಮೂಲಕ ಮಡಿಕೇರಿ ವೀಕ್ಷಣೆ
ತುಂಬೆ ಏವಿಯೇಷನ್ ಸಂಸ್ಥೆ ಮಡಿಕೇರಿಯಲ್ಲಿ ಜನವರಿ 1 ವರೆಗೆ ಹೆಲಿಕಾಪ್ಟರ್ ಮೂಲಕ ಮಡಿಕೇರಿ ವೀಕ್ಷಿಸಬಹುದು. 8 ನಿಮಿಷಗಳು ಆಕಾಶದಲ್ಲಿ ಸುತ್ತಾಡಲು ಮೂರು ಸಾವಿರ ರೂಪಾಯಿ ಪಾವತಿಸಬೇಕು.
![ಪ್ರವಾಸೋದ್ಯಮ ಚೇತರಿಕೆಗೆ ಕೊಡಗಿನಲ್ಲಿ ಒಂದು ವಾರ ಹೆಲಿಟೂರಿಸಂ ಪ್ರಾರಂಭ..! Heli Tourism a week in Kodagu](https://etvbharatimages.akamaized.net/etvbharat/prod-images/768-512-9993470-930-9993470-1608817534892.jpg)
ತುಂಬೆ ಏವಿಯೇಷನ್ ಸಂಸ್ಥೆ ಮಡಿಕೇರಿಯಲ್ಲಿ ಜನವರಿ 1 ವರೆಗೆ ಹೆಲಿಕಾಪ್ಟರ್ ಮೂಲಕ ಮಡಿಕೇರಿ ವೀಕ್ಷಿಸಬಹುದು. ಬೆಟ್ಟಗುಡ್ಡಗಳು, ಹಸಿರು ಕಾನನಗಳಿಂದಲೇ ತುಂಬಿರುವ ಮಡಿಕೇರಿ ಸೌಂದರ್ಯವನ್ನು ರಸ್ತೆಗಳ ಮೂಲಕವಷ್ಟೇ ಸವಿದಿದ್ದ ಪ್ರವಾಸಿಗರು ಇನ್ನು ಒಂದು ವಾರ ಆಕಾಶದಲ್ಲಿ ತೇಲುತ್ತಾ ಮಂಜಿನ ನಗರಿಯ ಸೌಂದರ್ಯ ಸವಿಯಬಹುದು.
ಮ್ಯಾನ್ಸ್ ಕಾಂಪೌಂಡ್ ಮೈದಾನದಿಂದ ಹಾರಾಟ ನಡೆಸುವ ಹೆಲಿಕಾಪ್ಟರ್ ಮಡಿಕೇರಿಯ ನಗರ ಸೇರಿದಂತೆ ಮಡಿಕೇರಿ ಹೊರವಲಯದಲ್ಲಿ ಹಾರಾಡಲಿದೆ. ಆದರೆ, ಆಕಾಶದಲ್ಲಿ ಹಾರಾಡುತ್ತಾ ಮಡಿಕೇರಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಬೇಕೆಂದರೆ 3 ಸಾವಿರ ಖರ್ಚು ಮಾಡಬೇಕು. 8 ನಿಮಿಷಗಳು ಆಕಾಶದಲ್ಲಿ ಸುತ್ತಾಡಲು ಮೂರು ಸಾವಿರ ರೂಪಾಯಿ ಪಾವತಿಸಬೇಕು. ಒಟ್ಟಿನಲ್ಲಿ ಕೋವಿಡ್‌ನಿಂದ ಪ್ರವಾಸೋದ್ಯಮ ಕುಂಟುತ್ತ ಸಾಗುತ್ತಿರುವುದರಿಂದ ಪ್ರವಾಸಿಗರನ್ನು ಸೆಳೆಯಲು ಉತ್ತಮ ಯೋಜನೆಯನ್ನು ಇಲಾಖೆ ಮುಂದಾಗಿದೆ.