ಕೊಡಗು: ಜಿಲ್ಲೆಯಾದ್ಯಂತ ಭಾರಿ ಗಾಳಿಯಿಂದ ಕೂಡಿದ ಮಳೆಯಾಗುತ್ತಿದ್ದು ಮಡಿಕೇರಿಯಲ್ಲಿ ಮಂಜು ಮುಸುಕಿದ ವಾತಾವರಣ ಕಂಡು ಬಂದಿದೆ.
ಕೊಡಗು ಜಿಲ್ಲೆಯಲ್ಲಿ ದಿಢೀರನೆ ಜೋರು ಗಾಳಿ-ಮಳೆ.. ಮಂಜಿನಿಂದ ಕೂಡಿದ ಈ ದೃಶ್ಯ ಮನಮೋಹಕ.. - ಭಾರಿ ಗಾಳಿಯಿಂದ ಕೂಡಿದ ಮಳೆ
ಮಂಜಿನ ನಗರಿಗೆ ಭಾರಿ ಗಾಳಿಯೊಂದಿಗೆ ದಿಢೀರನೆ ದಟ್ಟ ಮಂಜು ಆವರಿಸಿದೆ. ಕೊರೆಯುವ ಚಳಿಯ ಜೊತೆ ತುಂತುರು ಮಳೆಗೆ ಮೈಯೊಡ್ಡಿದ ಕೊಡಗಿನ ಜನತೆ ಸುರಿಯುತ್ತಿದ್ದ ಮಳೆಯಲ್ಲೇ ಕೊಡೆ ಹಿಡಿದು ಸಾಗುತ್ತಿದ್ದಾರೆ.
ಮಳೆ
ಮಂಜಿನ ನಗರಿಗೆ ಭಾರಿ ಗಾಳಿಯೊಂದಿಗೆ ದಿಢೀರನೆ ದಟ್ಟ ಮಂಜು ಆವರಿಸಿದೆ. ಕೊರೆಯುವ ಚಳಿಯ ಜೊತೆ ತುಂತುರು ಮಳೆಗೆ ಮೈಯೊಡ್ಡಿದ ಕೊಡಗಿನ ಜನತೆ ಸುರಿಯುತ್ತಿದ್ದ ಮಳೆಯಲ್ಲೇ ಕೊಡೆ ಹಿಡಿದು ಸಾಗುತ್ತಿದ್ದಾರೆ.
ಮಂಜಿನಿಂದ ಆವೃತವಾದ ಬೆಟ್ಟ, ಗುಡ್ಡಗಳಿಂದ ಸೌಂದರ್ಯ ಲೋಕ ಸೃಷ್ಟಿಯಾದ ಅನುಭವವಾಗುತ್ತಿದೆ. ಜಿಲ್ಲೆಯಾದ್ಯಂತ ಕೃಷಿ ಚಟುವಟಿಕೆಗಳು ಗರಿಗೆದರಿದ್ದು, ಮುಂಜಾನೆಯಿಂದ ತುಂತುರು ಮಳೆ ಎಡೆಬಿಡದೆ ಸುರಿಯುತ್ತಿದೆ.