ಕರ್ನಾಟಕ

karnataka

By

Published : Aug 1, 2020, 2:56 PM IST

ETV Bharat / state

ಕೊಡಗು ಜಿಲ್ಲೆಯಲ್ಲಿ ಆಶ್ಲೇಷ ಮಳೆ ಬಿರುಸು: ಭತ್ತದ ನಾಟಿ ಕೆಲಸಗಳು ಚುರುಕು

ಕೊಡಗಿನಾದ್ಯಂತ ಮೋಡ ಕವಿದ ವಾತಾವರಣವಿದೆ. ಇದ್ರ ಜೊತೆಗೆ ಅಲ್ಲಲ್ಲಿ ಸುರಿಯುತ್ತಿದ್ದ ಸೋನೆ ಮಳೆಯಲ್ಲೇ ಜನ ಕೊಡೆ ಹಿಡಿದು ದೈನಂದಿನ ಕೆಲಸಗಳಿಗೆ ತೆರಳುತ್ತಿದ್ದ ದೃಶ್ಯಗಳು ಕಂಡುಬಂದವು.

Heavy rainfall in Kodagu district
ಕೊಡಗು ಜಿಲ್ಲೆಯಲ್ಲಿ ಚುರುಕಾದ ತುಂತುರು ಮುಂಗಾರು ಮಳೆ..!

ಕೊಡಗು:ವಾರದಿಂದ ಬಿಡುವು ಕೊಟ್ಟಿದ್ದ ವರುಣ ಮತ್ತೆ ಚುರುಕಾಗಿದ್ದು, ಬೆಳಗ್ಗೆಯಿಂದ ಜಿಲ್ಲೆಯಾದ್ಯಂತ ತುಂತುರು ಮಳೆಯಾಗುತ್ತಿದೆ.

ಮುಂಗಾರು ಮಳೆಯೇ.. ಏನು ನಿನ್ನ ಹನಿಗಳ ಲೀಲೆ..

ಜೂನ್, ಜುಲೈ ತಿಂಗಳಲ್ಲಿ ವಾಡಿಕೆ ಪ್ರಮಾಣದ ಮಳೆ ಬಿದ್ದಿಲ್ಲ. ಆಗಸ್ಟ್ ತಿಂಗಳ ಪ್ರಾರಂಭದಲ್ಲಿ ಆಶ್ಲೇಷ ಮಳೆ ಮುಂದಡಿ ಇಟ್ಟಿದೆ‌.

ವಿರಾಜಪೇಟೆ ವ್ಯಾಪ್ತಿ, ಬ್ರಹ್ಮಗಿರಿ ತಪ್ಪಲು,‌ ಪುಷ್ಪಗಿರಿ, ಭಾಗಮಂಡಲ, ನಾಪೋಕ್ಲುವಿನಲ್ಲಿ ಮಳೆ ಬಿರುಸು ಪಡೆದುಕೊಂಡಿದೆ. ಭತ್ತದ ನಾಟಿ ಕೆಲಸಗಳು ಕೂಡ ಗರಿಗೆದರಿವೆ.

ಇಂದಿನಿಂದ ಲಾಕ್‌ಡೌನ್ ಮುಕ್ತಾಯಗೊಂಡಿದ್ದು ನಗರದಲ್ಲಿ ವಾಹನಗಳ ಓಡಾಟವೂ ಜೋರಾಗಿತ್ತು. ಒಂದೆಡೆ ಶರವೇಗದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಮಧ್ಯೆ ಮಳೆ ಪ್ರವಾಹವನ್ನು ಸೃಷ್ಠಿಸದಿರಲಿ ಎಂಬುದು ಸ್ಥಳೀಯರ ಪ್ರಾರ್ಥನೆ.

ABOUT THE AUTHOR

...view details