ಕರ್ನಾಟಕ

karnataka

ETV Bharat / state

ಕೊಡಗಿನಲ್ಲಿ ಅಬ್ಬರಿಸಿದ ವರುಣ, ತ್ರಿವೇಣಿ ಸಂಗಮ ಮುಳುಗಡೆ ಭೀತಿ - ಭಾಗಮಂಡಲ-ತಲಕಾವೇರಿ ರಸ್ತೆ ಸಂಪರ್ಕ ಕಡಿತ

ತಲಕಾವೇರಿ, ಬ್ರಹ್ಮಗಿರಿ, ಭಾಗಮಂಡಲ ಹಾಗೂ ನಾಪೋಕ್ಲು ಭಾಗದಲ್ಲಿ ವಿಪರೀತ ಮಳೆಯಾಗುತ್ತಿರುವುದರಿಂದ ತ್ರಿವೇಣಿ ಸಂಗಮ ಮುಳುಗಡೆಯಾಗುವ ಭೀತಿ ಎದುರಾಗಿದೆ. ಮಳೆ ಹೀಗೆ ಮುಂದುವರೆದ್ರೆ ಭಾಗಮಂಡಲ-ತಲಕಾವೇರಿ ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಳ್ಳಲಿದೆ..

Heavy rainfall in Kodagu district Fears of flooding
ಕೊಡಗಿನಲ್ಲಿ ವರುಣಾರ್ಭಟ, ಮುಳುಗಡೆಯಾಗುವ ಭೀತಿಯಲ್ಲಿ ತ್ರಿವೇಣಿ ಸಂಗಮ

By

Published : Sep 20, 2020, 5:24 PM IST

ಕೊಡಗು (ಭಾಗಮಂಡಲ): ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. ಜನಜೀವನ ಅಸ್ತವ್ಯಸ್ತವಾಗಿದೆ. ಭಾಗಮಂಡಲ ಬಹುತೇಕ ಜಲಾವೃತವಾಗುತ್ತಿದೆ.‌ ಮೇಲ್ಸೇತುವೆ ಮುಳುಗಡೆಗೆ ಕೇವಲ 8 ಅಡಿಗಳಷ್ಟು ಮಾತ್ರ ಬಾಕಿ ಇದೆ.‌

ಕೊಡಗಿನ ತ್ರಿವೇಣಿ ಸಂಗಮಮುಳುಗಡೆ ಭೀತಿ

ತಲಕಾವೇರಿ, ಬ್ರಹ್ಮಗಿರಿ, ಭಾಗಮಂಡಲ ಹಾಗೂ ನಾಪೋಕ್ಲು ಭಾಗದಲ್ಲಿ ವಿಪರೀತ ಮಳೆಯಾಗುತ್ತಿರುವುದರಿಂದ ತ್ರಿವೇಣಿ ಸಂಗಮ ಮುಳುಗಡೆಯಾಗುವ ಭೀತಿ ಎದುರಾಗಿದೆ. ಮಳೆ ಹೀಗೆ ಮುಂದುವರೆದ್ರೆ ಭಾಗಮಂಡಲ-ತಲಕಾವೇರಿ ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಳ್ಳಲಿದೆ.

ಈಗಾಗಲೇ ‌ನಾಪೋಕ್ಲು ರಸ್ತೆ ಮೇಲೆ 6 ಅಡಿಗಳಷ್ಟು ನೀರು ಹರಿಯುತ್ತಿದೆ. ಪ್ರವಾಹದ ನೀರಿನಲ್ಲೇ ಜನರು ನದಿಯನ್ನು ದಾಟುತ್ತಿದ್ದಾರೆ.‌ ಹಾಗೆಯೇ, ಕಾವೇರಿ ನದಿ ತಟದ ಗ್ರಾಮಗಳಲ್ಲಿ ಪ್ರವಾಹದ ಆತಂಕ ಎದುರಾಗಿದೆ.‌ ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು, ಮತ್ತೊಮ್ಮೆ ಪ್ರವಾಹದ ಭೀತಿ ಸೃಷ್ಟಿಯಾಗಿದೆ.

ABOUT THE AUTHOR

...view details