ಕರ್ನಾಟಕ

karnataka

ETV Bharat / state

ಕೊಡಗು ಜಿಲ್ಲೆಯಲ್ಲಿ ಆಲಿಕಲ್ಲು ಮಳೆ: 25 ಕೆಜಿ ತೂಕದ ಆಲಿ ಕಲ್ಲು ಪತ್ತೆ

ಕೊಡಗು ಜಿಲ್ಲೆಯಲ್ಲಿ ಗುಡುಗು ಸಹಿತ ಆಲಿಕಲ್ಲು ಮಳೆಯಾಗಿದ್ದು, 25 ಕೆಜಿ ತೂಕದ ಆಲಿಕಲ್ಲು ಬಿದ್ದಿರುವುದು ಅಚ್ಚರಿ ಮೂಡಿಸಿದೆ.

25 ಕೆಜಿ ತೂಕದ ಆಲಿಕಲ್ಲು
25 ಕೆಜಿ ತೂಕದ ಆಲಿಕಲ್ಲು

By

Published : Apr 28, 2022, 7:49 AM IST

ಕೊಡಗು:ಕೊಡಗು ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ಮಳೆಯಾಗುತ್ತಿದೆ‌. ಸೋಮವಾರಪೇಟೆ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಗುಡುಗು ಸಹಿತ ಧಾರಾಕಾರ ಮಳೆಯಾಗಿದ್ದು, ಅಲ್ಲಲ್ಲಿ ಆಲಿ ಕಲ್ಲು ಮಳೆಯಾಗಿದೆ. ಕುಂದಳ್ಳಿ ಗ್ರಾಮದಲ್ಲಿ ಸುಮಾರು 25 ಕೆ.ಜಿ.ತೂಕದ ಆಲಿಕಲ್ಲು ಬಿದ್ದಿದ್ದು, ಬೆಳಗ್ಗೆವರೆಗೆ ಕರಗದೇ ಇರೋದು ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿಸಿದೆ.

ಮಳೆ - ಗಾಳಿಗೆ ಅನೇಕ ಕಡೆ ಕಾಫಿ ತೋಟದೊಳಗೆ ಮರಗಳು ನೆಲಕ್ಕುರುಳಿದ್ದು ರೈತರಿಗೆ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಕಳೆದ ಬಾರಿ ಕೂಡ ಜಿಲ್ಲೆಯ ಸೋಮವಾರಪೇಟೆ ಭಾಗದಲ್ಲಿ ಆಲಿ ಕಲ್ಲು ಮಳೆಯಾಗಿದ್ದು, ಅಪಾರ ಪ್ರಮಾಣದ ನಷ್ಟ ಉಂಟಾಗಿತ್ತು. ಮಳೆಯಿಂದ ಕಾಫಿ ತೋಟಕ್ಕೆ ಉಪಯೋಗವಾದರೆ, ಹಸಿಮೆಣಸಿಕಾಯಿ, ಸೌತೆ ಬೆಳೆ ಸೇರಿದಂತೆ ಇನ್ನಿತರ ಬೆಳೆಗಾರರಿಗೆ ನಷ್ಟವಾಗಿದೆ.

25 ಕೆಜಿ ತೂಕದ ಆಲಿಕಲ್ಲು

(ಇದನ್ನೂ ಓದಿ: ಮಳೆಗೆ ಧರೆಗುರುಳಿದ ಬಾಳೆ; ಮಡದಿಯ ತಾಳಿ ಒತ್ತೆಯಿಟ್ಟ ರೈತನ ಬವಣೆ)

ABOUT THE AUTHOR

...view details