ಮಡಿಕೇರಿ: ಅದ್ಯಾಕೋ ಗೊತ್ತಿಲ್ಲ ರಾಜ್ಯದ ಜನ್ರ ಮೇಲೆ ವರುಣರಾಯ ತುಸು ಹೆಚ್ಚಾಗೇ ಮುನಿಸಿಕೊಂಡಿದ್ದಾನೆ. ಧಾರಾಕಾರ ಮಳೆಗೆ ಜನರ ಬದುಕು ಬೀದಿಗೆ ಬಿದ್ದಿದ್ದು, ಹಲವರು ಸೂರು ಕಳೆದುಕೊಂಡರೆ, ಅನೇಕರು ತಮ್ಮ ಕುಟುಂಬವನ್ನೇ ಕಳೆದುಕೊಂಡು ಅನಾಥ ಪ್ರಜ್ಞೆಯನ್ನು ಅನುಭವಿಸ್ತಿದ್ದಾರೆ.
ಮನೆ ಮೇಲೆ ಕುಸಿದು ಬಿದ್ದ ಬೆಟ್ಟ, ಕುಟುಂಬವೇ ಸರ್ವನಾಶ
ಧಾರಾಕಾರ ಮಳೆಗೆ ರಾಜ್ಯದ ಜನರ ಬದುಕು ಬೀದಿಗೆ ಬಿದ್ದಿದ್ದು, ಹಲವರು ಸೂರು ಕಳೆದುಕೊಂಡರೆ, ಇನ್ನು ಹಲವರು ತಮ್ಮ ಕುಟುಂಬವನ್ನೇ ಕಳೆದುಕೊಂಡು ಅನಾಥ ಪ್ರಜ್ಞೆಯನ್ನು ಅನುಭವಿಸ್ತಿದ್ದಾರೆ.
ನನ್ನ ಮಕ್ಕಳ ಬಗ್ಗೆ ನೂರಾರು ಕನಸು ಕಂಡಿದ್ದೆ. ಅವರು ಓದಿನಲ್ಲಿ ಮುಂದಿದ್ದರು. ಮಗಳನ್ನು ಚೆನ್ನಾಗಿ ಓದಿಸಿ ಐಎಎಸ್ ಅಧಿಕಾರಿಯನ್ನಾಗಿ ಮಾಡ್ಬೇಕು ಎಂದುಕೊಂಡಿದ್ದೆ. ಆದರೆ ನಾನು ತೋಟಕ್ಕೆ ಹೋಗಿ ಬರುವಷ್ಟರಲ್ಲಿ ತಾಯಿ, ಹೆಂಡತಿ, ಮಕ್ಕಳ ಮೇಲೆ ಮಣ್ಣಿನ ರಾಶಿಯೇ ಬಿದ್ದಿತ್ತು ಎಂದು ಬಿಕ್ಕಿ ಬಿಕ್ಕಿ ಅಳುವ ಈ ತಂದೆಯನ್ನು ನೋಡಿದ್ರೆ ಎಂತವರ ಕರಳು ಚುರಕ್ ಅನ್ನದೇ ಇರಲಾರದು. ಕೆಲ ದಿನಗಳಿಂದ ಮಂಜಿನ ನಗರಿ ಮಡಿಕೇರಿಯಲ್ಲಿ ಸುರಿದ ಧಾರಾಕಾರ ಮಳೆಗೆ ಬೆಟ್ಟ ಕುಸಿದಿದೆ. ಬೃಹತ್ ಬೆಟ್ಟದ ಅಡಿಯಲ್ಲಿ ತೋರಾ ಗ್ರಾಮದ ಪ್ರಭು ಕುಟುಂಬ ಸಮಾಧಿಯಾಗಿದೆ.
ನಾಲ್ಕು ಜೆಸಿಬಿ ಯಂತ್ರಗಳನ್ನು ಬಳಸಿ ಭೂ ಕುಸಿತ ಸ್ಥಳದಲ್ಲಿ ಕಾರ್ಯಾಚರಣೆ ನಡೆಯಿತು. ಅಲ್ಲಿ ಇನ್ನೂ 10 ಮಂದಿ ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಓರ್ವ ಮಹಿಳೆ ಮೃತದೇಹ ಲಭ್ಯವಾಗಿದ್ದು,ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಒಟ್ಟಿನಲ್ಲಿ ನೆಮ್ಮದಿಯ ಜೀವನ ನಡೆಸುತ್ತಿದ್ದವರ ಬಾಳಿನಲ್ಲಿ ವಿಧಿ ಆಟ ಆಡಿದ್ದು ಘೋರ ದುರಂತವೇ ಸರಿ.