ಕರ್ನಾಟಕ

karnataka

ETV Bharat / state

ಕೊಡಗಿನಲ್ಲಿ ಮುಂಗಾರು ಆರ್ಭಟ; ನದಿಗಳ ಮಟ್ಟ ಏರಿಕೆ - ಕೊಡಗು ಮಳೆ ನ್ಯೂಸ್

ಕೊಡಗಿನಲ್ಲಿ ಮುಂಗಾರು ಮಳೆ ಮಂದುವರೆದಿದೆ. ಕಳೆದ ಮೂರು ವರ್ಷಗಳಲ್ಲಿ ಸಂಭವಿಸಿದ ಜಲಪ್ರಳಯ ಕಂಡು ಬೆಚ್ಚಿರುವ ಜನರಲ್ಲಿ‌ ಮತ್ತೆ ಆತಂಕ ಶುರುವಾಗಿದೆ.

heavy rain in kodagu
ಕೊಡಗಿನಲ್ಲಿ ಮುಂದುವರೆದ ಮಳೆ

By

Published : Jun 16, 2021, 12:40 PM IST

Updated : Jun 16, 2021, 12:59 PM IST

ಕೊಡಗು: ಕೊಡಗಿನಲ್ಲಿ ಮೂರು ದಿನಗಳಿಂದ ಮುಂಗಾರು ಮಳೆ ಸುರಿಯುತ್ತಿದ್ದು, ಜನರು ಆತಂಕದಲ್ಲಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಸಂಭವಿಸಿದ ಜಲಪ್ರಳಯ ಕಂಡು ಬೆಚ್ಚಿರುವ ಜನರಲ್ಲಿ‌ ಮತ್ತೆ ಆತಂಕ ಶುರುವಾಗಿದೆ. ಕಾವೇರಿ ನೀರಿನ ಮಟ್ಟ ಏರಿಕೆಯಾಗುತ್ತಿದೆ, ಹಳ್ಳ ಕೊಳ್ಳ ತುಂಬಿ ಹರಿಯುತ್ತಿವೆ, ತಲಕಾವೇರಿ ಮತ್ತು ಭಾಗಮಂಡಲದಲ್ಲಿ ಮಳೆ ಆರ್ಭಟ ಹೆಚ್ಚಾಗಿದೆ. ಕಾವೇರಿ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ಭಾಗಮಂಡಲದಿಂದ ಮುಂದೆ ಹೋಗುವ ಜನರು ಜೀವ ಭಯದಲ್ಲಿ ಜೀವನ‌ ಕಳೆಯುತ್ತಿದ್ದಾರೆ.

ಮುಂದುವರೆದ ಮುಂಗಾರು ಮಳೆ

ಇಂದು ಬೆಳಗ್ಗೆ 8 ಗಂಟೆಯವರೆಗೆ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್​ ಘೋಷಿಸಲಾಗಿತ್ತು. ಜಿಲ್ಲೆಯಲ್ಲಿ 115.6 ಮಿ.ಮೀ. ಇಂದ 204 ಮಿ.ಮೀ. ವರೆಗೆ ಮಳೆ ಬೀಳುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಈಗಾಗಲೇ ಅಪಾಯದ ಸ್ಥಳದಲ್ಲಿರುವ ಜನರು, ಬೆಟ್ಟ ಗುಡ್ಡಗಳಲ್ಲಿ ವಾಸ ಮಾಡುತ್ತಿರುವವರು, ನದಿ ಅಂಚಿನಲ್ಲಿರುವ ಜನರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಆದೇಶ ಮಾಡಲಾಗಿದೆ. ಜಿಲ್ಲೆಯಲ್ಲಿ ಅನಾಹುತ ಸಂಭವಿಸದಂತೆ ಎಚ್ಚರ ವಹಿಸಿದ್ದು, ಎನ್​ಡಿಆರ್​ಎಫ್ ತಂಡವನ್ನು ನಿಯೋಜನೆ ಮಾಡಲಾಗಿದೆ.

ಇದನ್ನೂ ಓದಿ:ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ: ಕೆಆರ್​ಎಸ್​ ಒಳಹರಿವು ಹೆಚ್ಚಳ

Last Updated : Jun 16, 2021, 12:59 PM IST

ABOUT THE AUTHOR

...view details