ಕೊಡಗು:ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಬಿಡುವು ನೀಡಿದ್ದ ಮಳೆ ಮತ್ತೆ ಅಬ್ಬರಿಸುತ್ತಿದೆ. ಮುಂದಿನ 24 ಗಂಟೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಕೊಡಗು ಜಿಲ್ಲೆಯಲ್ಲಿ ಮತ್ತೆ ಮಳೆ; ಪ್ರವಾಹ, ಭೂಕುಸಿತದ ಆತಂಕ - ಕೊಡಗು ಜಿಲ್ಲೆಯಲ್ಲಿ ಮತ್ತೆ ಮಳೆ
ನಿನ್ನೆ ಸಂಜೆಯಿಂದಲೂ ಜಿಲ್ಲೆಯಾದ್ಯಂತ ಧಾರಕಾರ ಮಳೆ ಸುರಿಯುತ್ತಿದ್ದು ಮತ್ತೆ ಪ್ರವಾಹ ಮತ್ತು ಭೂಕುಸಿತ ಆಗುವ ಆತಂಕ ಸೃಷ್ಟಿಯಾಗಿದೆ.

ಮಳೆ
ಕೊಡಗು ಜಿಲ್ಲೆಯಲ್ಲಿ ಮತ್ತೆ ಮಳೆ
ನಿನ್ನೆ ಸಂಜೆಯಿಂದಲೂ ಜಿಲ್ಲೆಯಾದ್ಯಂತ ಧಾರಕಾರ ಮಳೆ ಸುರಿಯುತ್ತಿದ್ದು ಮತ್ತೆ ಪ್ರವಾಹ ಮತ್ತು ಭೂಕುಸಿತ ಆಗುವ ಆತಂಕ ಸೃಷ್ಟಿಯಾಗಿದೆ. ತಲಕಾವೇರಿ, ಭಾಗಮಂಡಲ ಸುತ್ತಮುತ್ತ ನಿನ್ನೆ ಸಂಜೆಯಿಂದಲೂ ಎಡಬಿಡದೆ ಭಾರೀ ಸುರಿಯುತ್ತಿದೆ. ಪರಿಣಾಮವಾಗಿ ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ಕಾವೇರಿ ನದಿ ನೀರಿನ ಪ್ರಮಾಣದಲ್ಲಿ ಮೂರು ಅಡಿಯಷ್ಟು ಏರಿಕೆಯಾಗಿದೆ.
ಮಳೆ ಹೀಗೆ ಮುಂದುವರಿದಲ್ಲಿ ಮತ್ತೆ ಪ್ರವಾಹ ಸೃಷ್ಟಿಯಾಗುವ ಆತಂಕವಿದೆ. ಒಂದು ವೇಳೆ ಮಳೆ ಹೀಗೆ ಮುಂದುವರೆದಲ್ಲಿ ತಲಕಾವೇರಿ ಸಮೀಪದ ಕೋಳಿಕಾಡು, ಚೇರಂಗಾಲ ಮತ್ತು ಕೋರಂಗಾಲ ಗ್ರಾಮಗಳಲ್ಲಿ ಭೂಕುಸಿತವಾಗುವ ಸಾಧ್ಯತೆ ಇದೆ.