ಕೊಡಗು:ನಿನ್ನೆಯಿಂದ ಜಿಲ್ಲಾದ್ಯಂತ ಮುಂಗಾರು ಚುರುಕುಗೊಂಡಿದ್ದು,ರಾತ್ರಿಯಿಡಿ ಎಡೆಬಿಡದೇ ಮಳೆಯಾಗಿದೆ.
ಮಂಜಿನ ನಗರಿಯಲ್ಲಿ ಮುಂಗಾರು ಚುರುಕು.. ಗರಿಗೆದರಿದ ಕೃಷಿ ಚಟುವಟಿಕೆ - undefined
ಕೊಡಗಿನಲ್ಲಿ ರಾತ್ರಿಯಿಡಿ ಮಳೆಯಾಗಿದ್ದು, ಮಂಜಾನೆ ಸ್ವಲ್ಪ ಮಟ್ಟಿಗೆ ವರುಣ ಆರ್ಭಟ ತಗ್ಗಿದೆ. ಮಳೆಯಿಂದಾಗಿ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಪೂರೈಕೆ ಅಸ್ತವ್ಯಸ್ತವಾಗಿದ್ದು ಜನರು ರಾತ್ರಿಯಿಡಿ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
![ಮಂಜಿನ ನಗರಿಯಲ್ಲಿ ಮುಂಗಾರು ಚುರುಕು.. ಗರಿಗೆದರಿದ ಕೃಷಿ ಚಟುವಟಿಕೆ](https://etvbharatimages.akamaized.net/etvbharat/prod-images/768-512-3761164-thumbnail-3x2-hsn.jpg)
ವರುಣ ಆಗಮನ ಕಳೆದ ವರ್ಷಕ್ಕೆ ಹೋಲಿಸಿದರೆ ಸ್ವಲ್ಪ ತಡವಾಗಿಯೇ ಆರಂಭವಾಗಿದೆ. ನಿನ್ನೆಯಿಂದ ಅಹೋರಾತ್ರಿ ಸುರಿದ ಮಳೆಗೆ ಜನತೆ ಹೈರಾಣಾಗಿದ್ದು, ಪುಷ್ಪಗಿರಿ, ಬ್ರಹ್ಮಗಿರಿ ತಪ್ಪಲಿನಲ್ಲಿ ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದ ಹಳ್ಳ - ಕೊಳ್ಳ, ನದಿ - ತೊರೆಗಳು ಹಾಗೂ ಕಾವೇರಿ ಕೊಳ್ಳದ ಭಾಗದಲ್ಲೂ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ಕೆಲವು ಗ್ರಾಮೀಣ ಭಾಗದಲ್ಲಿ ವಿದ್ಯುತ್ ಪೂರೈಕೆ ಅಸ್ತವ್ಯಸ್ತವಾಗಿದ್ದು, ಮಳೆ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿವೆ.
ಹಾಗೆಯೇ, ಕಳೆದ ಬಾರಿ ದುರಂತದ ಸ್ಥಳಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಈಗಾಗಲೇ ಸಂಭಾವ್ಯ ಅಪಾಯ ಎದುರಿಸಲು ಜಿಲ್ಲಾಡಳಿತವೂ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಎನ್ಡಿಆರ್ಎಫ್ ವಿಪತ್ತು ನಿರ್ವಹಣಾ ತಂಡ ಮಳೆಗಾಲ ಮುಗಿಯುವವರೆಗೆ ಜಿಲ್ಲೆಯಲ್ಲೇ ಮೊಕ್ಕಾಂ ಹೂಡಿ ಅಪಾಯಕಾರಿ ಸ್ಥಳಗಳ ಮೇಲೆ ನಿಗಾ ಇಟ್ಟಿದೆ. ಸದ್ಯ ಮುಂಜಾನೆಯಿಂದ ಮಳೆಯ ಪ್ರಮಾಣ ಕೊಂಚ ತಗ್ಗಿದೆ.