ಮಡಿಕೇರಿ:ಕಳೆದ ಎರಡು ದಿನಗಳಿಂದ ಕೊಡಗು ಜಿಲ್ಲಾದ್ಯಂತ ಸುರಿಯುತ್ತಿರುವ ಮಳೆಗೆ ಹಲವೆಡೆ ಸಣ್ಣ, ಪುಟ್ಟ ಸಮಸ್ಯೆಗಳಾಗಿದ್ದು, ಮಡಿಕೇರಿ ನಗರದಲ್ಲಿ ಮನೆಯೊಂದು ಭಾಗಶಃ ಕುಸಿದು ಬಿದ್ದಿದೆ.
ಕೊಡಗಿನಲ್ಲಿ ಭಾರಿ ಮಳೆ: ಮಡಿಕೇರಿಯಲ್ಲಿ ಭಾಗಶಃ ಕುಸಿದ ಮನೆ - Heavy rain in Madikeri
ಕೊಡಗು ಜಿಲ್ಲಾದ್ಯಂತ ಕಳೆದೆರಡು ದಿನಗಳಿಂದ ಭಾರಿ ಮಳೆ ಸುರಿಯುತ್ತಿದ್ದು, ಪರಿಣಾಮ ಮಡಿಕೇರಿ ನಗರದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ.
![ಕೊಡಗಿನಲ್ಲಿ ಭಾರಿ ಮಳೆ: ಮಡಿಕೇರಿಯಲ್ಲಿ ಭಾಗಶಃ ಕುಸಿದ ಮನೆ Heavy rain in Koadgu](https://etvbharatimages.akamaized.net/etvbharat/prod-images/768-512-7965471-432-7965471-1594352876351.jpg)
ಕೊಡಗಿನಲ್ಲಿ ಭಾರೀ ಮಳೆ
ನಗರದ ಮಲ್ಲಿಕಾರ್ಜುನ ನಗರದ ನಾಗಮ್ಮ ಎಂಬುವವರ ಮನೆಯ ಒಂದು ಭಾಗ ಕುಸಿದು ಬಿದ್ದಿದೆ. ಪರಿಣಾಮ ಶೌಚಾಲಯ, ಸ್ನಾನಗೃಹ ಸಂಪೂರ್ಣ ನೆಲಸಮವಾಗಿದೆ. ಘಟನೆ ವೇಳೆ ಮನೆಯಲ್ಲಿ ಯಾರೂ ಇಲ್ಲದಿದ್ದರಿಂದ ಯಾವುದೇ ಅನಾಹುತಗಳು ಸಂಭವಿಸಿಲ್ಲ.
ಮಡಿಕೇರಿಯಲ್ಲಿ ಭಾಗಶಃ ಕುಸಿದ ಮನೆ
ಮನೆಯ ಹಿಂಭಾಗದಿಂದ ಮಣ್ಣು ಕುಸಿದ ಪರಿಣಾಮ ಈ ಹಾನಿ ಸಂಭವಿಸಿದೆ. ಈ ಪ್ರದೇಶದಲ್ಲಿ ಇನ್ನೂ ನಾಲ್ಕೈದು ಮನೆಗಳ ಗೋಡೆ ಬಿರುಕು ಬಿಟ್ಟಿದ್ದು ಅಪಾಯದ ಮುನ್ಸೂಚನೆ ನೀಡುತ್ತಿದೆ. ಆದ್ದರಿಂದ ನಗರಸಭೆ ಅಥವಾ ಜಿಲ್ಲಾಡಳಿತ ತಡೆಗೋಡೆ ನಿರ್ಮಿಸಿ ಅನಾಹುತ ನಡೆಯದಂತೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.