ಕೊಡಗು:ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರೆದಿದೆ. ಕಾವೇರಿ ನದಿು ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ತಲಕಾವೇರಿ ಮತ್ತು ಭಾಗಮಂಡಲದ ಕೆಲ ಭಾಗಗಳು ಜಲಾವೃತವಾಗಿವೆ. ಭಾಗಮಂಡಲದಲ್ಲಿ ರಸ್ತೆ ಮೇಲೆ ನೀರು ಹರಿಯುತ್ತಿರುವುದರಿಂದ ನಾಪೋಕ್ಲುಗೆ ಸಂಪರ್ಕಿಸುವ ರಸ್ತೆ ಸಂಚಾರ ಕಡಿತಗೊಂಡು ಅಲ್ಲಿನ ಗ್ರಾಮಗಳ ಜನರು ಪರದಾಡುವಂತಾಗಿದೆ.
ಭಾಗಮಂಡಲದಲ್ಲಿ ರಸ್ತೆ ಸಂಚಾರ ಕಡಿತ; ಭೂಕಂಪನದಿಂದ ಬೆಚ್ಚಿದ ಗಡಿಭಾಗದ ಜನತೆ
ಕೊಡಗಿನಲ್ಲಿ ಮಳೆಯ ಅಬ್ಬರದ ನಡುವೆ ಮತ್ತೊಮ್ಮೆ ಜಿಲ್ಲೆಯ ಗಡಿ ಪ್ರದೇಶದಲ್ಲಿ ಭೂಕಂಪನದ ಅನುಭವ ಆಗಿದೆ.
ಕೊಡಗು: ಭಾಗಮಂಡಲದಲ್ಲಿ ರಸ್ತೆ ಸಂಚಾರ ಕಡಿತ.. ಭೂಕಂಪನದಿಂದ ಬೆಚ್ಚಿದ ಗಡಿಭಾಗದ ಜನತೆ
ಕಾವೇರಿ ನದಿ ತುಂಬಿ ಹರಿಯುತ್ತಿರುವುದರಿಂದ ಆತಂಕ ಹೆಚ್ಚಾಗಿರುವ ಬೆನ್ನಲ್ಲೇ, ಕೊಡಗು ಜಿಲ್ಲೆಯ ಗಡಿ ಭಾಗದಲ್ಲಿ ಭಾನುವಾರ ಬೆಳ್ಳಂಬೆಳಗ್ಗೆ 6.23ರ ಸುಮಾರಿಗೆ ಸಂಭವಿಸಿದ ಭೂಕಂಪನವು ಜನರ ನಿದ್ದೆಗೆಡಿಸಿದೆ. ಇತ್ತೀಚೆಗೆ 9ನೇ ಬಾರಿಗೆ ಭೂಮಿ ಕಂಪಿಸಿದ್ದು, ಗಡಿಭಾಗದ ಚೆಂಬು, ಸಂಪಾಜೆ, ಪರೆಜೆಯಲ್ಲಿನ ಜನರಲ್ಲಿ ಆತಂಕ ಮನೆ ಮಾಡಿದೆ.
ಇದನ್ನೂ ಓದಿ:ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿದೆ ಗೋಕಾಕ್ ಫಾಲ್ಸ್; ಫೋಟೋ ಕ್ಲಿಕ್ಕಿಸಲು ಪ್ರವಾಸಿಗರ ದುಸ್ಸಾಹಸ