ಕೊಡಗು :ಜಿಲ್ಲೆಯ ಕುಶಾಲನಗರ ಸಮೀಪದ ಹಾರಂಗಿ ಜಲಾಶಯದ ಅಣೆಕಟ್ಟಿನ ಪಕ್ಕದಲಿರುವ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿದ ವಸತಿ ಸಚಿವ ವಿ ಸೋಮಣ್ಣ ಬಾಗಿನ ಅರ್ಪಿಸಿದರು. ಇದೇ ವೇಳೆ
ಡ್ಯಾಮ್ನ ನಾಲ್ಕು ಗೇಟ್‌ಗಳ ಮೂಲಕ ನದಿಗಳಿಗೆ ನೀರು ಹರಿಸುವುದಕ್ಕೆ ಸಚಿವರು ಚಾಲನೆ ನೀಡಿದರು.
ಪ್ರಸಕ್ತ ವರ್ಷದಲ್ಲಿ ಖಾರಿಫ್ ಬೆಳೆಗೆ ಹಾಗೂ ಕೆರೆ ಕಟ್ಟೆಗಳಿಗೆ ನೀರು ಹರಿಸುವುದಕ್ಕೆ ಚಾಲನೆ ನೀಡಲಾಯಿತು. ಈ ವೇಳೆ ಮಾತನಾಡಿದ ವಿ ಸೋಮಣ್ಣ, ಇದರಿಂದ 1.60 ಲಕ್ಷ ಎಕರೆ ಪ್ರದೇಶಕ್ಕೆ ನೀರು ಪೂರೈಕೆಯಾಗಲಿದೆ.
ಹಾರಂಗಿ ಜಲಾಶಯನಕ್ಕೆ ಬಾಗಿನ ಅರ್ಪಿಸಿದ ವಿ. ಸೋಮಣ್ಣ ಜಿಲ್ಲೆಯ ಸೋಮವಾರಪೇಟೆ, ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ಹುಣಸೂರು, ಕೃಷ್ಣರಾಜನಗರ ಹಾಗೂ ಹಾಸನ ಜಿಲ್ಲೆಯ ಅರಕಲಗೋಡು ತಾಲೂಕು ವ್ಯಾಪ್ತಿಗೆ ನೀರು ಸೌಲಭ್ಯ ದೊರೆಯಲಿದೆ ಎಂದು ತಿಳಿಸಿದರು.
ಯಡಿಯೂರಪ್ಪ ರಾಜ್ಯದ, ಪಕ್ಷದ ಪ್ರಶ್ನಾತೀತ ನಾಯಕ. ಅವರು ಮುಖ್ಯಮಂತ್ರಿ ಯಾದಾಗ ಬರ ಪರಿಸ್ಥಿತಿ ಇರುವುದಿಲ್ಲ. ಪ್ರಕೃತಿ ಆಶೀರ್ವಾದ ಅವರ ಮೇಲಿದೆ. ಈಗ ಕೊಡಗಿನಲ್ಲಿ ಸಮೃದ್ಧವಾಗಿ ಮಳೆಯಾಗಿ ಹಾರಂಗಿ ಜಲಾಶಯ ತುಂಬಿದೆ. ನೀರನ್ನು ನದಿಗಳಿಗೆ ಬಿಡಲಾಗಿದೆ, ಇದರಿಂದ ರೈತರಿಗೆ ಕೃಷಿ ಮಾಡಲು ಅನುಕೂಲವಾಗಿದೆ ಎಂದರು.
ಇದನ್ನೂ ಓದಿ : ಡಿಕೆಶಿ ಔತಣ ಕೂಟ.. ಬೆಂಗಳೂರು ಕೈ ಶಾಸಕರ ಸಭೆಗೆ ಸಿದ್ದರಾಮಯ್ಯ ಬಂದರು, ಜಮೀರ್ ಗೈರು..