ಕೊಡಗು: ಜಿಲ್ಲೆಯಲ್ಲಿ ಈವರೆಗೂ 47 ಕೊರೊನಾ ಪ್ರಕರಣಗಳು ದಾಖಲಾಗಿರುವ ಹಿನ್ನೆಲೆ 21 ಪ್ರದೇಶಗಳನ್ನು ಸೀಲ್‌ಡೌನ್ ಮಾಡಲಾಗಿದೆ.
ಕೊಡಗು: ಸಂಕಷ್ಟದಲ್ಲಿರುವ ಜನರಿಗೆ ಜೆಡಿಎಸ್‌ನಿಂದ ದಿನಸಿ ಕಿಟ್ ವಿತರಣೆ - ಕೊರೊನಾ ವೈರಸ್ ಅಪ್ಡೇಟ್
ಕೊಡಗು ಜಿಲ್ಲಾಡಳಿತ ಸೀಲ್‌ಡೌನ್ ಪ್ರದೇಶದ ಕುಟುಂಬಗಳಿಗೆ ಅಗತ್ಯ ವಸ್ತುಗಳನ್ನು ವಿತರಿಸಬೇಕು ಎಂದು ಜೆಡಿಎಸ್ ಮುಖಂಡರು ಸರ್ಕಾರವನ್ನು ಒತ್ತಾಯಿಸಿದರು.
ದಿನಸಿ ವಿತರಣೆ
ಸೀಲ್‌ಡೌನ್ ಮಾಡಿರುವ ಕಾರಣ, ಸೋಮವಾರಪೇಟೆ ತಾಲೂಕಿನ ಶಿರಂಗಾಲ ಗ್ರಾಮಸ್ಥರಿಗೆ ಕೊಡಗು ಜಿಲ್ಲಾ ಜೆಡಿಎಸ್‌ನಿಂದ ಅಗತ್ಯ ವಸ್ತುಗಳ ವಿತರಣೆ ಮಾಡಲಾಯಿತು. ದಿನಸಿ ವಸ್ತುಗಳನ್ನು ಸರಿಯಾಗಿ ಪೂರೈಸುತ್ತಿಲ್ಲ ಎಂದು ಆ ಪ್ರದೇಶದ ಜನರು ಆಕ್ರೋಶ ವ್ಯಕ್ತಪಡಿಸಿದ್ದರು.
ಸೀಲ್‌ಡೌನ್ ಆಗಿರುವ ಪ್ರವೇಶದಲ್ಲೇ ವ್ಯಕ್ತಿಯೊಬ್ಬರನ್ನು ಕರೆದು ಆ ಪ್ರದೇಶದ ಅಷ್ಟೂ ಕುಟುಂಬಗಳಿಗೂ ಅಕ್ಕಿ, ಎಣ್ಣೆ, ಮಸಾಲ ಪದಾರ್ಥಗಳು ಸೇರಿದಂತೆ ವಿವಿಧ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು.