ಕೊಡಗು: ಭಾಗಮಂಡಲದ ಭಗಂಡೇಶ್ವರ-ತಲಕಾವೇರಿ ದೇವಾಲಯದಲ್ಲಿ ಶಾಸ್ತ್ರಸಿದ್ಧ ಶ್ರೀಕೃಷ್ಣ ಪಂಚಾಂಗದಂತೆ ಅಕ್ಟೋಬರ್, 25 ರಂದು ಮಂಗಳವಾರ ಖಂಡಗ್ರಾಸ ಸೂರ್ಯಗ್ರಹಣವು ಸಂಜೆ 5 ಗಂಟೆ 11 ನಿಮಿಷಕ್ಕೆ ಪ್ರಾರಂಭಗೊಂಡು ಸಂಜೆ 6 ಗಂಟೆ 28 ನಿಮಿಷಕ್ಕೆ ಗ್ರಹಣ ಮೋಕ್ಷವಾಗಲಿದೆ.
ಅಂದು ಭಗಂಡೇಶ್ವರ-ತಲಕಾವೇರಿ ಸಂಪ್ರದಾಯದಂತೆ ಪೂಜಾ ವಿಧಿ ವಿಧಾನಗಳ ಜತೆಗೆ ಶ್ರೀ ಭಗಂಡೇಶ್ವರ ದೇವಾಲಯದ ತ್ರಿವೇಣಿ ಸಂಗಮದಲ್ಲಿ ಬೆಳಗ್ಗೆ 6 ಗಂಟೆಯಿಂದ ಬೆಳಗ್ಗೆ 11 ಗಂಟೆಯವರೆಗೆ ಪಿಂಡ ಪ್ರಧಾನ ಕಾರ್ಯ ನೆರವೇರಿಸಲಾಗುವುದು.
ಅ.25ರಂದು ಭಾಗಮಂಡಲದದಲ್ಲಿ ವಿಶೇಷ ಪೂಜೆ ಶ್ರೀ ಭಗಂಡೇಶ್ವರ ದೇವಾಲಯ: ಭಕ್ತರಿಗೆ ಸೇವಾ ಕೈಂಕರ್ಯಗಳು ಬೆಳಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ನಡೆಸಲಾಗುವುದು. ಖಂಡಗ್ರಾಸ ಸೂರ್ಯಗ್ರಹಣದ ಮೋಕ್ಷ ನಂತರ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ರಾತ್ರಿ 7 ಗಂಟೆಯಿಂದ ನಿತ್ಯ ಪೂಜೆ ನೆರವೇರಿಸಲಾಗುವುದು.
ತಲಕಾವೇರಿ ದೇವಾಲಯ: ಖಂಡಗ್ರಾಸ ಸೂರ್ಯಗ್ರಹಣದ ಪ್ರಯುಕ್ತ ಶ್ರೀ ತಲಕಾವೇರಿ ದೇವಾಲಯದಲ್ಲಿ ಅಕ್ಟೋಬರ್ 25 ರಂದು ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2.30 ಗಂಟೆಯವರೆಗೆ ಭಕ್ತರ ಸೇವಾ ಕೈಂಕರ್ಯ ನೆರವೇರಿಸಲಾಗುವುದು. ನಂತರ ಯಾವುದೇ ಸೇವೆಗಳು ಇರುವುದಿಲ್ಲ ಎಂದು ಶ್ರೀ ಭಗಂಡೇಶ್ವರ-ತಲಕಾವೇರಿ ಸಮೂಹ ದೇವಾಲಯಗಳ ಕಾರ್ಯನಿರ್ವಹಣಾಧಿಕಾರಿ ಬಿ.ಎಂ.ಕೃಷ್ಣಪ್ಪ ತಿಳಿಸಿದ್ದಾರೆ.