ಕರ್ನಾಟಕ

karnataka

ETV Bharat / state

ಮಡಿಕೇರಿ: ಒಂದೇ ಮರದಲ್ಲಿ ಗ್ರಾ.ಪಂ ಸದಸ್ಯೆ, ಪಕ್ಕದ ಮನೆ ವ್ಯಕ್ತಿಯ ಶವ ಪತ್ತೆ - ಪಕ್ಕದ ಮನೆಯವನ ಜೊತೆ ಗ್ರಾಪಂ ಸದಸ್ಯೆ ಶವ ಪತ್ತೆ

ಗ್ರಾ.ಪಂ ಸದಸ್ಯೆ ಹಾಗೂ ಅದೇ ಗ್ರಾಮದ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

dead body
dead body

By

Published : Sep 16, 2021, 8:58 PM IST

ಮಡಿಕೇರಿ: ಗ್ರಾಮ ಪಂಚಾಯತ್ ಸದಸ್ಯೆ ಮತ್ತು ಅದೇ ಗ್ರಾಮದ ವ್ಯಕ್ತಿಯ ಶವ ಒಂದೇ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಮಡಿಕೇರಿ ತಾಲೂಕಿನ ಚೆಂಬು ಗ್ರಾಮದ ಬಳಿಯ ಕಾಡಿನಲ್ಲಿ ಪತ್ತೆಯಾಗಿವೆ.

ಒಂದೇ ಮರದಲ್ಲಿ ಗ್ರಾ.ಪಂ ಸದಸ್ಯೆ ಮತ್ತು ಪಕ್ಕದ ಮನೆ ವ್ಯಕ್ತಿಯ ಶವ ಪತ್ತೆ!

ಮಡಿಕೇರಿ ತಾಲೂಕು ಚೆಂಬು ಗ್ರಾಮದ ಪಂಚಾಯತ್ ಸದಸ್ಯೆ ಕಮಲಾ ಮತ್ತು ಅದೇ ಗ್ರಾಮದ ಮುತ್ತು ಎಂಬಾತನ ಶವ ಕಾಡಿನಲ್ಲಿ ಪತ್ತೆಯಾಗಿದೆ.

ಘಟನೆಯ ವಿವರ:

ಬುಧವಾರ ಸಂಜೆ ಗ್ರಾ.ಪಂ ಸದಸ್ಯೆ ಕಮಲಾ ಸ್ಥಳೀಯ ಕೆಲವರೊಂದಿಗೆ ಬೇರೊಂದು ಮನೆಯ ಕಾರ್ಯಕ್ರಮಕ್ಕೆ ಹೋಗುತ್ತಿದ್ದರು. ಆಗ ದಬ್ಬಡ್ಕ ಸೇತುವೆಯ ಬಳಿ ಬರುತ್ತಿದ್ದಂತೆ ಪಕ್ಕದ ಮನೆಯ ಮುತ್ತು ಎಂಬುವವನು ಸೇತುವೆಯ ಮೇಲೆ ನಡೆದುಕೊಂಡು ಹೋಗುತ್ತಿದ್ದ ಕಮಲಾರನ್ನು ನದಿಯ ನೀರಿಗೆ ತಳ್ಳಿ ಬಳಿಕ ಕರೆದುಕೊಂಡು ಹಾಕಿದ್ದ ಎನ್ನಲಾಗಿತ್ತು.

ಬಳಿಕ ಸ್ಥಳೀಯರು ಮತ್ತು ಪೊಲೀಸರು ಇವರಿಗಾಗಿ ಹುಡುಕಾಟ ನಡೆಸಿದ್ದರು. ಆದ್ರೆ ಇಂದು ನದಿಯ ಹತ್ತಿರದ ಕಾಡಿನಲ್ಲಿ ಇಬ್ಬರ ಶವಗಳು ಪತ್ತೆಯಾಗಿವೆ. ಮಡಿಕೇರಿ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದು, ಘಟನೆಯ ಕುರಿತು ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

ABOUT THE AUTHOR

...view details