ಕರ್ನಾಟಕ

karnataka

ETV Bharat / state

ಕೊಡಗು: ಮನೆಗೆ ನುಗ್ಗಿ 100 ಪವನ್ ಆಭರಣ, ₹10 ಲಕ್ಷ ನಗದು ದೋಚಿದ ಕಳ್ಳರು - gold ornments and cas theft from house in kodagu

ಕೊಡಗು ಜಿಲ್ಲೆಯ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ಕಳ್ಳತನ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

gold-and-money-theft-from-house-in-madikeri-kodagu
ಕೊಡಗು : ಹಾಡಹಗಲೇ 100 ಪವನ್ ಆಭರಣ, 10 ಲಕ್ಷ ನಗದು ದರೋಡೆ

By

Published : Jun 16, 2022, 5:21 PM IST

ಕೊಡಗು: ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಪಾಲಿಬೆಟ್ಟ ಅಮ್ಮತ್ತಿ ರಸ್ತೆಯ ಮನೆಯೊಂದರಲ್ಲಿ ಕಳ್ಳತನ ನಡೆದಿದೆ. ಜೂನ್ 12ರಂದು ಇಲ್ಲಿನ ಕೂತಂಡ ಸುಬ್ರಹ್ಮಣಿ ಎಂಬವರ ಮನೆಗೆ ನುಗ್ಗಿದ ಖದೀಮರು ಸುಮಾರು 100 ಪವನ್ ಆಭರಣ ಹಾಗೂ 10 ಲಕ್ಷ ರೂ ನಗದು ಕದ್ದೊಯ್ದಿದ್ದಾರೆ.

ದರೋಡೆ ನಡೆಸಿ ಪರಾರಿಯಾಗಿರುವ ಕಳ್ಳರು- ಸಿಸಿಟಿವಿ ದೃಶ್ಯ

ಮನೆಯಲ್ಲಿದ್ದ ದಂಪತಿ ಮಧ್ಯಾಹ್ನ ಪಾಲಿಬೆಟ್ಟ ಪಟ್ಟಣಕ್ಕೆ ಹೋಗಿದ್ದರು. ಮನೆಗೆ ಹಿಂತಿರುಗಿದಾಗ ಘಟನೆ ಬೆಳಕಿಗೆ ಬಂದಿದೆ. ಪ್ರಕರಣದ ತನಿಖೆಗೆ ವಿಶೇಷ ಪೊಲೀಸ್‌ ತಂಡ ರಚಿಸಲಾಗಿದೆ. ಆರೋಪಿಗಳ ಸುಳಿವು ಲಭ್ಯವಾಗಿದ್ದು ಶೀಘ್ರವಾಗಿ ಬಂಧಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ಗುರುತು ಪತ್ತೆ

ಇದನ್ನೂ ಓದಿ:ಸಾಲ ಮರುಪಾವತಿಗೆ ಜಮೀನು, ಮನೆ ಕೇಳಿದ ಸಾಲದಾತ: ಖಿನ್ನತೆಗೊಳಗಾಗಿ ರೈತ ಆತ್ಮಹತ್ಯೆ

ABOUT THE AUTHOR

...view details