ಕೊಡಗು: ಜೀವನದಿ ಕಾವೇರಿಯ ಉಗಮ ಸ್ಥಾನವಾದ ತಲಕಾವೇರಿಯ ಹೆಬ್ಬಾಗಿಲಿನಲ್ಲಿ ಇತ್ತೀಚೆಗೆ ಕುಣಿದು ವಿವಾದ ಸೃಷ್ಟಿಸಿದ್ದ ಮೂವರು ಯುವತಿಯರು ಕ್ಷಮೆ ಕೇಳಿದ್ದಾರೆ.
ಯುವತಿಯರು ಕುಣಿದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಬಳಿಕ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಇದನ್ನು ಖಂಡಿಸಿ, ಇದಕ್ಕೆ ಕ್ಷಮೆ ಕೇಳಬೇಕೆಂದು ಒತ್ತಾಯಿಸಿತ್ತು.