ಕರ್ನಾಟಕ

karnataka

ETV Bharat / state

ದೇವಸ್ಥಾನದ ಗಂಟೆಗಳಿಗೆ ಕನ್ನ ಹಾಕುತ್ತಿದ್ದ ನಾಲ್ವರು ಖದೀಮರ ಬಂಧನ - four thieves arrested in temple bell theft case

ದೇವಸ್ಥಾನಗಳ ಗಂಟೆ ಕಳ್ಳತನ - ನಾಲ್ವರು ಕಳ್ಳರ ಬಂಧನ - ಸರಣಿ ಗಂಟೆ ಕಳ್ಳತನ ಪ್ರಕರಣ ಭೇದಿಸಿದ ಕೊಡಗು ಪೊಲೀಸರು

four-thieves-arrested-in-stealing-temple-bells
ದೇವಸ್ಥಾನದ ಗಂಟೆಗಳಿಗೆ ಕನ್ನ ಹಾಕುತ್ತಿದ್ದ ನಾಲ್ವರು ಖದೀಮರ ಬಂಧನ

By

Published : Jan 10, 2023, 10:36 PM IST

ಕೊಡಗು: ದೇವಸ್ಥಾನಗಳ ಗಂಟೆ ಕಳವು ಮಾಡುತ್ತಿದ್ದ ನಾಲ್ವರು ಕಳ್ಳರನ್ನು ಕೊಡಗು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 10 ಲಕ್ಷ ಮೌಲ್ಯದ 750 ಕೆಜಿ ತೂಕದ ಗಂಟೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ಮೈಸೂರಿನ ನಿವಾಸಿಗಳಾದ ಅಮ್ಜದ್ ಅಹಮ್ಮದ್ (37), ಸಮೀವುಲ್ಲಾ (22), ಜುಲ್ಫಿಕರ್ (36) ಹಾಗೂ ಹೈದರ್ (36) ಗುರುತಿಸಲಾಗಿದೆ. ಬಂಧಿತ ಆರೋಪಿಗಳು ಕೊಡಗು ಸೇರಿದಂತೆ ಹಲವು ಜಿಲ್ಲೆಗಳ ವಿವಿಧ ದೇಗುಲಗಳಲ್ಲಿ ಗಂಟೆಗಳನ್ನು ಕಳವು ಮಾಡಿದ್ದರು. ಬಂಧಿತರಿಂದ ವಿವಿಧ ಲೋಹಗಳ ಗಂಟೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತ ಆರೋಪಿಗಳು ಒಂಟಿ ದೇವಾಲಯಗಳನ್ನು ಗುರಿಯಾಗಿಸಿ ಕಳ್ಳತನ ಮಾಡುತ್ತಿದ್ದರು. ಇವರು ಕೊಡಗು, ಮೈಸೂರು, ಹಾಸ‌ನ ಜಿಲ್ಲೆಗಳಲ್ಲಿ ಕಳವು ಮಾಡಿದ್ದಾರೆ. ಆರೋಪಿಗಳು ಊರಿನಿಂದ ಹೊರಗಿರುವ ದೇವಾಲಯಗಳನ್ನು ಕಳವು ಮಾಡಲು ಹಗಲಿನಲ್ಲಿ ನೋಡಿಕೊಂಡು ಬರುತ್ತಿದ್ದರು. ಬಳಿಕ ರಾತ್ರಿ ವೇಳೆ ದೇವಾಲಯಕ್ಕೆ ತೆರಳಿ ತಾಮ್ರದ ಕಟರ್ ಬಳಿಸಿ ಗಂಟೆಗಳನ್ನು ಕಳವು ಮಾಡುತ್ತಿದ್ದರು. ಹಳೆಯ ಕಾಲದ ತಾಮ್ರಕ್ಕೆ ಉತ್ತಮ ಬೆಲೆ ಇರುವ ಕಾರಣ ಗಂಟೆಗಳನ್ನು ಕದ್ದು ಮಾರಾಟ ಮಾಡುತ್ತಿದ್ದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಯಾಪ್ಟನ್ ಎಂ.ಎ.ಅಯ್ಯಪ್ಪ ತಿಳಿಸಿದರು.

ಹಲವು ದೇವಾಲಯಗಳಲ್ಲಿ ಗಂಟೆ ಕಳ್ಳತನ : ಕಳೆದ ನಾಲ್ಕು ತಿಂಗಳ ಹಿಂದೆ ನಾಪೋಕ್ಲು ಗ್ರಾಮದ ದೇವಸ್ಥಾನದಲ್ಲಿ ಗಂಟೆ ಕಳವಾಗಿತ್ತು. ಅಲ್ಲದೆ ಹಳಿಗಟ್ಟು ಭದ್ರಕಾಳಿ ದೇವಸ್ಥಾನದಲ್ಲಿ 10 ಗಂಟೆಗಳು ಕಳವಾಗಿದ್ದವು. ಇಲ್ಲಿ ಮಧ್ಯರಾತ್ರಿ ಎರಡು ಗಂಟೆ ವೇಳೆಗೆ ದೇವಸ್ಥಾನದ ಆವರಣದೊಳಗೆ ನುಗ್ಗಿದ ಕಳ್ಳರು ಗಂಟೆಗಳನ್ನು ಕಳವು ಮಾಡಿ ಪರಾರಿಯಾಗಿದ್ದರು.

ಸರಣಿ ಗಂಟೆ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು :ಕಳೆದ ಸೆ. 11ರಂದು ಇತಿಹಾಸ ಪ್ರಸಿದ್ಧ ನಾಪೋಕ್ಲು ಬೇತು ಗ್ರಾಮದಲ್ಲಿರುವ ಶ್ರೀಮಕ್ಕಿ ಶಾಸ್ತಾವು ದೇವಾಲಯದ ಆವರಣದಲ್ಲಿದ್ದ 30 ಗಂಟೆಗಳನ್ನು ಕಳವು ಮಾಡಲಾಗಿತ್ತು. ಪ್ರಕರಣ ಸಂಬಂಧ ತನಿಖೆ ನಡೆಸಿದ ಪೊಲೀಸರು, ಸರಣಿ ಗಂಟೆ ಕಳ್ಳತನ ಪ್ರಕರಣವನ್ನು ಭೇದಿಸಿದ್ದಾರೆ. ಸದ್ಯ ಬಂಧಿತರಿಂದ 100 ಕ್ಕೂ ಹೆಚ್ಚು ಗಂಟೆಗಳು ಮತ್ತು ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣವನ್ನು ಭೇದಿಸಿದ ಪೊಲೀಸರಿಗೆ ಜಿಲ್ಲಾ ಎಸ್ಪಿ ಬಹುಮಾನ ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ :ಉಂಡ ಮನೆಗೆ ಕನ್ನ ಹಾಕಿದ ದಂಪತಿ.. ಸೆಕ್ಯೂರಿಟಿ ನೇಮಕ ಮಾಡುವ ಮುಂಚೆ ಎಚ್ಚರ.. ಎಚ್ಚರ!

ABOUT THE AUTHOR

...view details