ಕರ್ನಾಟಕ

karnataka

ETV Bharat / state

ತೋರಾ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಮಾಜಿ ಸಿಎಂ ಸಿದ್ದರಾಮಯ್ಯ - ತೋರಾ ಗ್ರಾಮ

ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕರಡಿಗೋಡು ಹಾಗೂ ನೆಲ್ಯಹುದಿಕೇರಿ ನೆರೆ ಪೀಡಿತ ಪ್ರದೇಶಗಳಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ ಸಾಂತ್ವನ ಹೇಳಿದರು. ಬಳಿಕ ಭೂ ಕುಸಿತವಾದ ತೋರಾಕ್ಕೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಪರಿಶೀಲಿಸಿದರು.

Former CM Siddaramaiah

By

Published : Aug 30, 2019, 11:30 PM IST

ಕೊಡಗು:ಮಹಾ ಮಳೆಯಿಂದ ಭೂ ಕುಸಿತವಾದ ವಿರಾಜಪೇಟೆ ತಾಲೂಕಿನ ತೋರಾ ಗ್ರಾಮಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ ಘಟನೆಯ ವಿವರ ಪಡೆದು ನಿರಾಶ್ರಿತರಿಗೆ ಸಾಂತ್ವನ ಹೇಳಿದ್ದಾರೆ.

ತೋರಾ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಮಾಜಿ ಸಿಎಂ ಸಿದ್ದರಾಮಯ್ಯ

ಜಿಲ್ಲೆಯಲ್ಲಿ ಮಳೆಗೆ ಹಾನಿಗೊಳಗಾದ ಸೋಮವಾರಪೇಟೆ ತಾಲೂಕಿನ ಕರಡಿಗೋಡು ಹಾಗೂ ನೆಲ್ಯಹುದಿಕೇರಿ ನೆರೆ ಪೀಡಿತ ಪ್ರದೇಶಗಳಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ ಸಾಂತ್ವನ ಹೇಳಿ ಬಳಿಕ ಭೂ ಕುಸಿತವಾದ ತೋರಾಕ್ಕೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಪರಿಶೀಲಿಸಿದರು.

ಈ ವೇಳೆ ಗ್ರಾಮದ ನಿರಾಶ್ರಿತರು ಭೂಸಿತದಿಂದ ಅನುಭವಿಸುತ್ತಿರುವ ಸಮಸ್ಯೆಗಳನ್ನು ಮನವರಿಕೆ ಮಾಡಿ ಕೊಟ್ಟರು. ಅಲ್ಲದೆ ಸರ್ಕಾರದಿಂದ ಸಹಾಯ ನೀಡುವಂತೆ ಮನವಿ ಮಾಡಿದರು.

ABOUT THE AUTHOR

...view details