ಕೊಡಗು :ವನ್ಯ ಮೃಗಗಳು ಮತ್ತು ಮಾನವ ಸಂಘರ್ಷಕೊಡಗಿನಲ್ಲಿ ದಿನೇ ದಿನೆ ಹೆಚ್ಚಾಗುತ್ತಿದೆ. ಒಂದೆಡೆ ಕಾಡಾನೆ ದಾಳಿ ಮಾಡಿ ಬೆಳೆ ಹಾನಿ ಉಂಟು ಮಾಡಿದರೆ ಈಗ ಹುಲಿ ಕಾಟ ಶುರುವಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಹುಲಿ ನಾಲ್ಕು ಹಸುಗಳನ್ನು ಬಲಿ ಪಡೆದಿದೆ. ಹೀಗಾಗಿ ಜನರು ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ.
ಜಿಲ್ಲೆಯ ವಿರಾಜಪೇಟೆ ತಾಲೂಕಿನ ಸಿದ್ದಪುರದಲ್ಲಿ ಹುಲಿ ಉಪಟಳದ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಕ್ರಮ ಜರುಗಿಸಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಶಾಲೆಗೆ ಮಕ್ಕಳನ್ನು ಕಳುಹಿಸಲು ಭಯವಾಗುತ್ತಿದೆ. ತೋಟದ ಕೂಲಿ ಕೆಲಸಕ್ಕೆ ಬರಲು ಜನ ಒಪ್ಪುತ್ತಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯ ತೋರಿದ್ದಾರೆ. ನಾಲ್ಕು ಹಸುಗಳನ್ನು ಬಲಿ ಪಡೆಯುವವರಗೂ ಕ್ರಮ ಜರುಗಿಸಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.