ಕರ್ನಾಟಕ

karnataka

ETV Bharat / state

ಸತತ ಮೂರನೇ ವರ್ಷವೂ ಕೊಡಗಿನಲ್ಲಿ ಪ್ರವಾಹ: ಪ್ರಕೃತಿ ವಿಕೋಪದಿಂದ ಎಷ್ಟು ಮನೆಗಳಿಗೆ ಹಾನಿ? - 1818.40 ಮಿ.ಮೀಟರ್ ಮಳೆ

ಮಹಾಮಳೆಯಿಂದ ಮಡಿಕೇರಿ ತಾಲೂಕಿನಲ್ಲಿ 65, ಸೋಮವಾರಪೇಟೆ ತಾಲೂಕಿನಲ್ಲಿ 133 ಹಾಗೂ ವಿರಾಜಪೇಟೆ ವ್ಯಾಪ್ತಿಯಲ್ಲಿ 106 ಸೇರಿದಂತೆ ಒಟ್ಟು 304 ಮನೆಗಳು ಹಾನಿಯಾಗಿವೆ.

Floods in Kodagu district for three consecutive years
ಕೊಡಗು ಜಿಲ್ಲೆಯಲ್ಲಿ ಸತತ ಮೂರು ವರ್ಷಗಳಿಂದ ಪ್ರವಾಹ: ಪ್ರಕೃತಿ ವಿಕೋಪದಿಂದ 304 ಮನೆಗಳಿಗೆ ಹಾನಿ..!

By

Published : Aug 13, 2020, 3:46 PM IST

Updated : Aug 13, 2020, 3:58 PM IST

ಕೊಡಗು:ಜಿಲ್ಲೆಯಲ್ಲಿ ಮುಂಗಾರು ಮಳೆ ನಿರೀಕ್ಷೆಯಂತೆ ಮಳೆಯ ಪ್ರಮಾಣ ಹೆಚ್ಚಾಗಿದ್ದು, ಜನವರಿಯಿಂದ ಇಲ್ಲಿಯವರೆಗೆ ಜಿಲ್ಲೆಯಾದ್ಯಂತ 1,818.40 ಮಿಲಿ ಮೀಟರ್ ಮಳೆಯಾಗಿದೆ.

ಸತತ ಮೂರನೇ ವರ್ಷವೂ ಕೊಡಗಿನಲ್ಲಿ ಪ್ರವಾಹ: ಪ್ರಕೃತಿ ವಿಕೋಪದಿಂದ ಎಷ್ಟು ಮನೆಗಳಿಗೆ ಹಾನಿ?

ಈ ಬಾರಿ ಇತ್ತೀಚೆಗೆ ಬ್ರಹ್ಮಗಿರಿ ಬೆಟ್ಟ ಕುಸಿದು ಐವರು ನಾಪತ್ತೆಯಾಗಿದ್ದರೆ ಈ ಪೈಕಿ ಇಬ್ಬರ ಮೃತದೇಹಗಳು ಪತ್ತೆಯಾಗಿವೆ. 16 ಜಾನುವಾರುಗಳು ಅಸುನೀಗಿವೆ. ಒಟ್ಟು 3,200 ಹೆಕ್ಟೇರ್ ಬೆಳೆ ಹಾನಿಯಾಗಿದೆ. ತೋಟಗಾರಿಕೆ ಬೆಳೆ ಹಾನಿ ವಿಸ್ತೀರ್ಣ 32,500 ಹೆಕ್ಟೇರ್‌ಗಳಷ್ಟಿದ್ದು, ಮಹಾಮಳೆಯಿಂದ ಮಡಿಕೇರಿ ತಾಲೂಕಿನಲ್ಲಿ 65, ಸೋಮವಾರಪೇಟೆ ತಾಲೂಕಿನಲ್ಲಿ 133 ಹಾಗೂ ವಿರಾಜಪೇಟೆ ವ್ಯಾಪ್ತಿಯಲ್ಲಿ 106 ಸೇರಿದಂತೆ ಒಟ್ಟು 304 ಮನೆಗಳು ಹಾನಿಯಾಗಿವೆ.

ಮೂಲಭೂತ ಸೌಲಭ್ಯಗಳ ಹಾನಿ ವಿವರ:

ರಾಜ್ಯ ಹೆದ್ದಾರಿ 35.80 ಕಿ.ಮೀ, ಜಿಲ್ಲಾ ಮುಖ್ಯ ರಸ್ತೆಗಳು 26.78 ಕಿ.ಮೀ, ಗ್ರಾಮೀಣ ರಸ್ತೆಗಳು 260.37 ಕಿ.ಮೀ., ನಗರ ಪ್ರದೇಶದ ರಸ್ತೆಗಳು 47 ಕಿ.ಮೀ., ಸೇತುವೆ/ ಕಲ್ವರ್ಟ್ ಗಳು 20, ವಿದ್ಯುತ್ ಕಂಬಗಳು 2012, ವಿದ್ಯುತ್ ಪೂರೈಕೆ ಲೈನ್ 25,650 ಕಿ.ಮೀ. ಟ್ರಾನ್ಸ್ ಫಾರ್ಮರ್ ಗಳು -75, ಶಾಲಾ ಕಟ್ಟಡಗಳು 74, ಅಂಗನವಾಡಿಗಳು 13, ಸಮುದಾಯ ಭವನಗಳು 1, ಸಣ್ಣ ನೀರಾವರಿ ಕೆರೆಗಳು 32, ನೀರು ಪೂರೈಕೆ ಮತ್ತು ನೈರ್ಮಲ್ಯ ರಚನೆಗಳು 48, ತಡೆಗೋಡೆಗಳು 18 ಹಾಗೂ 1 ಸರ್ಕಾರಿ ಕಟ್ಟಡಗಳಿಗೆ ಹಾನಿಯಾಗಿವೆ.

ಮಡಿಕೇರಿ ತಾಲೂಕಿನ ಭಾಗಮಂಡಲ, ಚೇರಂಗಾಲ, ಕೋರಂಗಾಲ, ಅಯ್ಯಂಗೇರಿ, ತಾವೂರು, ತಣ್ಣಿಮಾನಿ, ಸಣ್ಣ ಪುಲಿಕೋಟು, ಬೇಂಗೂರು, ಕಡಿಯತ್ತೂರು, ಬಿ.ಬಾಡಗ, ಪದಕಲ್ಲು, ಬೇತು, ಎಮ್ಮೆಮಾಡು, ಬಲಮುರಿ, ನಾಪೋಕ್ಲು, ಬೆಟ್ಟಗೇರಿ, ಐಕೊಳ, ದೊಡ್ಡಪುಲಿಕೋಟು, ಹೊದ್ದೂರು, ಹೊದವಾಡ, ಕಿಗ್ಗಾಲು, ಎಸ್.ಕಟ್ಟೆಮಾಡು(ಪರಂಬು ಪೈಸಾರಿ) ಒಟ್ಟು 22 ಗ್ರಾಮ.

ವಿರಾಜಪೇಟೆ ತಾಲೂಕಿನ ಕರಡಿಗೋಡು, ಗುಹ್ಯ, ಕೊಂಡಂಗೇರಿ, ಹಚ್ಚಿನಾಡು, ನಾಲ್ಕೇರಿ, ಹೈಸೊಡ್ಲೂರು, ಬಲ್ಯಮಂಡೂರು, ಬಿರುನಾಣಿ, ತೆರಾಲು, ಅರುವತ್ತೊಕ್ಲು, ನಿಡುಗುಂಬ, ಹಾತೂರು, ಮೈತಾಡಿ, ಬಾಳೆಲೆ ಒಟ್ಟು 14 ಗ್ರಾಮಗಳು ಹಾಗೆಯೇ ಸೋಮವಾರಪೇಟೆ ತಾಲ್ಲೂಕಿನ ಮುಳ್ಳುಸೋಗೆ ಗ್ರಾಮದ ಕುವೆಂಪು ಬಡಾವಣೆ, ತಮ್ಮಣ್ಣಶೆಟ್ಟಿ ಬಡಾವಣೆ, ಗುಮ್ಮನಕೊಲ್ಲಿ, ಬಸವನಹಳ್ಳಿ, ಮಾದಾಪಟ್ಟಣ, ಬೈಚನಹಳ್ಳಿ, ಕೂಡ್ಲೂರು(ನಿಸರ್ಗ ಬಡಾವಣೆ) ಬೆಟ್ಟದಕಾಡು, ಬರಡಿ, ಕುಂಬಾರಗುಂಡಿ, ಅತ್ತೂರುನಲ್ಲೂರು (ಕೊಟ್ಟಗೇರಿ ಪೈಸಾರಿ) ಒಟ್ಟು 10 ಗ್ರಾಮಗಳು.

ಪಟ್ಟಣ ಪಂಚಾಯತಿ ಕುಶಾಲನಗರ ಸಾಯಿ ಬಡಾವಣೆ, ಬಸಪ್ಪ, ತ್ಯಾಗರಾಜ ರಸ್ತೆ, ವಿವೇಕಾನಂದ, ರಸೂಲ್, ಶೈಲಜ, ಇಂದಿರಾ ಬಡಾವಣೆ, ದಂಡಿನಪೇಟೆ, ಅಯ್ಯಪ್ಪಸ್ವಾಮಿ ದೇವಾಲಯ ರಸ್ತೆ, ಬಿದ್ದಪ್ಪ, ನಿಜಾಮುದ್ದೀನ್, ನಿಂಗೇಗೌಡ, ಯೋಗಾನಂದ, ತಾವರೆಕೆರೆ ಬಳಿ ಕುಶಾಲನಗರ-ಮಡಿಕೇರಿ ರಾಷ್ಟ್ರೀಯ ಹೆದ್ದಾರಿ ಒಟ್ಟು 14 ಗ್ರಾಮಗಳು ಸೇರಿ ಒಟ್ಟು ಪ್ರವಾಹ ಪೀಡಿತ ಪ್ರದೇಶಗಳು 60 ಆಗಿವೆ. ‌

ಜಿಲ್ಲೆಯಲ್ಲಿ ಭೂಕುಸಿತ ಉಂಟಾಗಿರುವ ಪ್ರದೇಶಗಳ ವಿವರ:

ಮಡಿಕೇರಿ ತಾಲೂಕಿನ ಬ್ರಹ್ಮಗಿರಿ (ತಲಕಾವೇರಿ) ಕೋರಂಗಾಲ, ಬೊಟ್ಲಪ್ಪ ಪೈಸಾರಿ(ಕಡಗದಾಳು) ಜೋಡುಪಾಲ, ನೀರುಕೊಲ್ಲಿ, 2 ನೇ ಮೊಣ್ಣಂಗೇರಿ ಕೊಯನಾಡು, ಪೆರಾಜೆ, ನಗರಸಭೆ ಮಡಿಕೇರಿ ದೇಚೂರು ಸೋಮವಾರಪೇಟೆ ತಾಲೂಕು ಪೆಂನ್ನತ್ಮೊಟ್ಟೆ, ಚೆಟ್ಟಳ್ಳಿ-ಮಡಿಕೇರಿ ರಸ್ತೆ(ಅಬ್ಯಾಲ) ವಿರಾಜಪೇಟೆ ತಾಲೂಕು ಮಗ್ಗುಲ(ಅಯ್ಯಪ್ಪಬೆಟ್ಟ) ಸೇರಿ ಒಟ್ಟು 12 ಕಡೆಗಳಲ್ಲಿ ಭೂಕುಸಿತವಾಗಿದೆ.

ಜಿಲ್ಲೆಯಲ್ಲಿ ಈವರೆಗೆ ರಕ್ಷಿಸಲಾಗಿರುವ ಸಂತ್ರಸ್ತರ ವಿವರ:

ನಾಪೋಕ್ಲು ಭಾಗದಲ್ಲಿ 13, ಹೊದವಾಡ 13, ನೆಲ್ಲಿಹುದಿಕೇರಿ 96, ಕಡಗದಾಳು 150, ಬಲಮುರಿ 7, ಕೊಟ್ಟಮುಡಿ 29, ಚೆರಿಯಪರಂಬು 7, ಬಾಳೆಗುಂಡಿ ಗ್ರಾಮ (ವಾಲ್ನೂರು ತ್ಯಾಗತ್ತೂರು) 6, ನಲ್ವತ್ತೆಕರೆ 12, ಬೆಟ್ಟಗೇರಿ 8, ಬೊಟ್ಲಪ್ಪ ಪೈಸಾರಿ, ಕಡಗದಾಳು 51, ಕೈಮಾಡು 5, ನೀರುಕೊಲ್ಲಿ 43, ಮೈತಾಡಿ 40, ಕೊಂಡಂಗೇರಿ 8, ಸಿದ್ದಾಪುರ (ಕುರುಬರ ಗುಂಡಿ) 8, ತಣ್ಣಿಮಾನಿ 50, ಬೆಟ್ಟದಕಾಡು 10, ಅತ್ತೂರುನಲ್ಲೂರು ಕೊಟ್ಟಗೇರಿ ಪೈಸಾರಿ 10, ಬಾಳೆಲೆ 2, ಚಾಮಿಯಾಲ 17, ಒಟ್ಟು 585.

ಜಿಲ್ಲೆಯಲ್ಲಿ ತೆರೆಯಲಾದ ಪರಿಹಾರ ಕೇಂದ್ರಗಳ ವಿವರ:

ಮಡಿಕೇರಿ ತಾಲೂಕಿನ ಭಾಗಮಂಡಲ ಹೋಬಳಿ, ಕಾಶಿಮಠದಲ್ಲಿ 50 ಕುಟುಂಬಗಳು ಆಶ್ರಯ ಪಡೆದಿದ್ದು, 102 ಸಂತ್ರಸ್ತರಿದ್ದಾರೆ. ಭಾಗಮಂಡಲ ಕೆ.ವಿ.ಜಿ. ಕಾಲೇಜು 39 ಕುಟುಂಬಗಳು ಆಶ್ರಯ ಪಡೆದಿದ್ದು, 95 ಸಂತ್ರಸ್ತರಿದ್ದಾರೆ. ಕಡಗದಾಳು ಸರ್ಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ 15 ಕುಟುಂಬಗಳು ಆಶ್ರಯ ಪಡೆದಿದ್ದು, 35 ಸಂತ್ರಸ್ತರಿದ್ದಾರೆ. ಮಡಿಕೇರಿ ತಾಲೂಕಿನಲ್ಲಿ ಒಟ್ಟು 3 ಕೇಂದ್ರಗಳಿದ್ದು, 104 ಕುಟುಂಬಗಳು ಆಶ್ರಯ ಪಡೆದಿದ್ದು, 232 ಸಂತ್ರಸ್ತರಿದ್ದಾರೆ.

ವಿರಾಜಪೇಟೆ ತಾಲೂಕಿನ ಕರಡಿಗೋಡು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ 21 ಕುಟುಂಬಗಳು ಆಶ್ರಯ ಪಡೆದಿದ್ದು, 41 ಜನ ಸಂತ್ರಸ್ತರಿದ್ದಾರೆ. ಕೊಂಡಂಗೇರಿ ಸರ್ಕಾರಿ ಪ್ರೌಢಶಾಲೆಯಲ್ಲಿ 8 ಕುಟುಂಬಗಳು ಆಶ್ರಯ ಪಡೆದಿದ್ದು, 27 ಜನ ಸಂತ್ರಸ್ತರಿದ್ದಾರೆ. ಕರಡಿಗೋಡು ಬಸವೇಶ್ವರ ಸಮುದಾಯ ಭವನದಲ್ಲಿ 19 ಕುಟುಂಬಗಳಿದ್ದು, 36 ಜನ ಸಂತ್ರಸ್ತರಿದ್ದಾರೆ.

Last Updated : Aug 13, 2020, 3:58 PM IST

ABOUT THE AUTHOR

...view details