ಕರ್ನಾಟಕ

karnataka

ETV Bharat / state

ಕೊಡಗಿನಲ್ಲಿ ನೆರೆ ಹಾವಳಿ: ನಿರಾಶ್ರಿತರಿಗೆ ಧೈರ್ಯ ತುಂಬುವ ಕಾರ್ಯದಲ್ಲಿ ಕೈ ನಾಯಕರು - floods in kodagu: congress followers visited damaged areas

ಶಾಸಕ ಹೆಚ್.ಸಿ.ಮಹದೇವಪ್ಪ ಮತ್ತು ಯತೀಂದ್ರ ಸಿದ್ದರಾಮಯ್ಯ ತಂಡ ಕೊಡಗು ಪ್ರವಾಸ ಕೈಗೊಂಡು ನಿರಾಶ್ರಿತರಿಗೆ ಸಾಂತ್ವನ ಹೇಳುವ ಕಾರ್ಯ ಮಾಡುತ್ತಿದೆ.

ನೆರೆ ಹಾವಳಿ

By

Published : Aug 18, 2019, 12:12 PM IST

ಕೊಡಗು:ಪ್ರವಾಹ ಹಾಗೂ ಭೂ ಕುಸಿತ ಪ್ರದೇಶಗಳಿಗೆ ಶಾಸಕ ಹೆಚ್.ಸಿ.ಮಹದೇವಪ್ಪ ತಂಡ ಭೇಟಿ ನೀಡಿ ಪರಿಶೀಲಿಸಿ ನಿರಾಶ್ರಿತರಿಗೆ ಸಾಂತ್ವಾನ ಹೇಳಿದೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕ ಹೆಚ್.ಸಿ.ಮಹದೇವಪ್ಪ, ಕೊಡಗು ಜಿಲ್ಲೆ ಕಳೆದ ಮತ್ತು ಈ ವರ್ಷ ಕೂಡ ಅತಿವೃಷ್ಟಿಗೆ ಒಳಗಾಗಿ ಸಾಕಷ್ಟು ನಷ್ಟ ಅನುಭವಿಸಿದೆ. ಜಿಲ್ಲೆಯಲ್ಲಿ ಕಂಡು-ಕೇಳರಿಯದ ರೀತಿಯಲ್ಲಿ ಪ್ರವಾಹ, ಭೂ ಕುಸಿತ ಸಂಭವಿಸಿರುವುದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು.

ಸರ್ಕಾರ ಸೂಕ್ತ ರೀತಿಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ಕೊಡಗಿನ ರಕ್ಷಣೆಗೆ ಮುಂದಾಗಬೇಕು. ರಾಜ್ಯದ ಹಲವು ಭಾಗಗಳಲ್ಲಿ ಕೂಡ ಪ್ರವಾಹದಿಂದ ಸಾಕಷ್ಟು ಹಾನಿಯಾಗಿದೆ. ರಕ್ಷಣಾ ಕಾರ್ಯದಲ್ಲಿ ಸೇನೆ ಉತ್ತಮ ಕಾರ್ಯ ಮಾಡಿರುವುದು ಶ್ಲಾಘನೀಯ. ಸರ್ಕಾರದ ಮಂತ್ರಿ ಮಂಡಲ ರಚನೆ ಆಗದಿದ್ದರೂ ಉತ್ತಮ ಕೆಲಸ ಮಾಡಿದೆ. ಮಂತ್ರಿ ಮಂಡಲ ರಚಿಸಿದ್ದರೆ ಹೆಚ್ಚಿನ ಅನಾಹುತ ತಪ್ಪಿಸಬಹುದಿತ್ತು ಎಂದರು.

ನಿರಾಶ್ರಿತರಿಗೆ ಧೈರ್ಯ ತುಂಬುವ ಕಾರ್ಯದಲ್ಲಿ ಕೈ ನಾಯಕರು

ರಾಜ್ಯ ಸರ್ಕಾರದ ಪರಿಹಾರ ನಿರಾಶ್ರಿತರಿಗೆ ಸಾಲುವುದಿಲ್ಲ. ಪ್ರಧಾನಮಂತ್ರಿಗಳು ಈ ವಿಪತ್ತನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು.‌ ತಕ್ಷಣವೇ ಕೇಂದ್ರ ಸರ್ಕಾರ 10 ಸಾವಿರ ಕೋಟಿ ರೂ. ಬಿಡುಗಡೆ ಮಾಡಬೇಕು. ನಿರಾಶ್ರಿತರಿಗೆ ಹೊಸ ವಸತಿ ನೀತಿ ಘೋಷಣೆ ಮಾಡಿ ಸೂರು ಒದಗಿಸಬೇಕು. ಜಿಲ್ಲೆಯ ಪುನರ್ ನಿರ್ಮಾಣಕ್ಕೆ ತಕ್ಷಣವೇ‌ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮುಂದಾಗಿ ಕೊಡಗಿನ ಪರಿಸರ ಸಮತೋಲನ ಹಾಳಾಗದಂತೆ ಸರ್ಕಾರಗಳು ಎಚ್ಚರ ವಹಿಸಬೇಕು ಎಂದರು.‌

ABOUT THE AUTHOR

...view details