ಕೊಡಗು:ಜಿಲ್ಲೆಯಲ್ಲಿ ಸಂಭವಿಸಿದ ಪ್ರವಾಹ ಹಾಗೂ ಭೂ ಕುಸಿತಕ್ಕೆ ಸಿಲುಕಿ ಮೃತಪಟ್ಟವರ ಸಂಖ್ಯೆ ಹತ್ತಕ್ಕೆ ಏರಿಕೆ ಆಗಿದೆ.
ಕೊಡಗಿನಲ್ಲಿ ಪ್ರವಾಹ, ಭೂಕುಸಿತ : ಹತ್ತಕ್ಕೆ ಏರಿದ ಮೃತರ ಸಂಖ್ಯೆ - Virajapete Thaluku Thora Village
ಭಾರಿ ಮಳೆಯಿಂದ ಕೊಡಗು ಜಿಲ್ಲೆಯಲ್ಲಿ ಪ್ರವಾಹ ಹಾಗೂ ಭೂಕುಸಿತ ಸಂಭವಿಸಿದ ಹಿನ್ನಲೆ ಸಾವನ್ನಪ್ಪಿದವರ ಸಂಖ್ಯೆ ಹತ್ತಕ್ಕೆ ಏರಿಕೆಯಾಗಿದೆ. ಭೂಕುಸಿತಗೊಂಡ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ರಕ್ಷಣಾ ತಂಡ ಹತ್ತನೇ ಮೃತದೇಹವನ್ನು ಪತ್ತೆ ಹಚ್ಚಿದೆ.
ಕೊಡಗಿನಲ್ಲಿ ಪ್ರವಾಹ: ಹತ್ತಕ್ಕೆ ಏರಿದ ಮೃತರ ಸಂಖ್ಯೆ
ವಿರಾಜಪೇಟೆ ತಾಲೂಕಿನ ತೋರ ಗ್ರಾಮದಲ್ಲಿ ನಡೆದಿದ್ದ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನಾ ಸ್ಥಳದಲ್ಲಿ ಕಾರ್ಯಚರಣೆ ಕೈಗೊಂಡಿದ್ದ ಎನ್.ಡಿ.ಆರ್.ಎಫ್, ಸೇನೆ ಹಾಗೂ ಪೊಲೀಸ್, ಮತ್ತೊಂದು ಮೃತದೇಹವನ್ನು ಪತ್ತೆ ಮಾಡಿದ್ದಾರೆ.
ಮಣ್ಣಿನಡಿಯಲ್ಲಿ ಸಿಲುಕಿದ ಹಿನ್ನಲೆ ಮೃತದೇಹ ಸಂಪೂರ್ಣ ಛಿದ್ರವಾಗಿದ್ದು, ಪತ್ತೆ ಹಚ್ಚಲು ಸಾಧ್ಯವಾಗದ ಸ್ಥಿತಿಯಲ್ಲಿದೆ. ಹಾಗೆಯೇ ಕಣ್ಮರೆ ಆಗಿರುವ 6 ಜನರಿಗೆ ಶೋಧ ಮುಂದುವರೆದಿದೆ.