ಕರ್ನಾಟಕ

karnataka

ETV Bharat / state

ಕೊಡಗಿನ ದುಬಾರೆಯ 5 ಆನೆಗಳು ಮಧ್ಯಪ್ರದೇಶದ ಭೋಪಾಲ್‌ಗೆ ಸ್ಥಳಾಂತರ - ಈಟಿವಿ ಭಾರತ ಕನ್ನಡ

ದುಬಾರೆ ಶಿಬಿರದಿಂದ ಕೆಲವು ಆನೆಗಳನ್ನು ಮಧ್ಯಪ್ರದೇಶಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ. ಶಿಬಿರದ ನಿರ್ವಹಣೆ ಮತ್ತು ಒತ್ತಡವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ. ಈ ಕುರಿತಂತೆ ಅರಣ್ಯ ಸಂರಕ್ಷಣಾಧಿಕಾರಿಯ ಹೇಳಿಕೆ ಇಲ್ಲಿದೆ.

Dubare camp elephants relocated
ದುಬಾರೆ ಶಿಬಿರದ ಆನೆಗಳು ಸ್ಥಳಾಂತರ

By

Published : Dec 25, 2022, 7:04 AM IST

ದುಬಾರೆ ಶಿಬಿರದ ಐದು ಆನೆಗಳ ಸ್ಥಳಾಂತರ

ಕೊಡಗು:ಇಲ್ಲಿಯ ದುಬಾರೆ ಶಿಬಿರದ 5 ಸಾಕಾನೆಗಳ‌ನ್ನು ಶನಿವಾರ ಮಧ್ಯಪ್ರದೇಶ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ. ಶಿಬಿರದಲ್ಲಿ ಒಟ್ಟು 32 ಆನೆಗಳಿವೆ. ನಿರ್ವಹಣೆ ಹಾಗೂ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ಜನರಲ್‌ ತಿಮ್ಮಯ್ಯ, ಜನರಲ್‌ ಕಾರ್ಯಪ್ಪ, ವಲ್ಲಿ, ಲವ, ಮಾರುತಿ ಎಂಬ ಹೆಸರಿನ ಸಾಕಾನೆಗಳನ್ನು ಮಧ್ಯಪ್ರದೇಶದ ಭೋಪಾಲ್‌ನಲ್ಲಿರುವ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ. ಶಿಬಿರದ ಮಾವುತರೊಂದಿಗೆ ಆನೆಗಳು ಲಾರಿಯ ಮೂಲಕ ಭೋಪಾಲ್​ಗೆ ತೆರಳಿವೆ.

ದುಬಾರೆ ಶಿಬಿರದಿಂದ ಎಂಟು ಮಾವುತರು ಮತ್ತು ಉಸ್ತುವಾರಿಗಳು ಆನೆಗಳೊಂದಿಗೆ ಮಧ್ಯಪ್ರದೇಶಕ್ಕೆ ತೆರಳಿದ್ದಾರೆ. ಕೊಡಗು ವಿಭಾಗದ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಭೋಪಾಲ್, ಮಧ್ಯಪ್ರದೇಶ ವಿಭಾಗದ ಅರಣ್ಯ ಇಲಾಖೆಯ ಸಿಬ್ಬಂದಿಯ ಸಮ್ಮುಖದಲ್ಲಿ ಆನೆಗಳನ್ನು ವರ್ಗಾವಣೆ ಮಾಡಲಾಗಿದೆ. ಈ ಹಿಂದೆ ಈ ಐದು ಆನೆಗಳು ಕಾಡಿನಿಂದ ನಾಡಿಗೆ ಬಂದು ಪುಂಡಾಟ ಮೆರೆಯುತ್ತಿದ್ದವು. ಇವುಗಳನ್ನು ಸೆರೆಹಿಡಿದು ದುಬಾರೆ ಶಿಬಿರದಲ್ಲಿ ಪಳಗಿಸಲಾಗಿತ್ತು.

ಇದನ್ನೂ ಓದಿ:ಅರಿವಳಿಕೆ ಚುಚ್ಚು ಮದ್ದು ಪಡೆದು ಅರೆ ಮಂಪರಿನಲ್ಲಿದ್ದ ಕಾಡಿನತ್ತ ಓಡಿಹೋದ ಆನೆ

ABOUT THE AUTHOR

...view details