ಕರ್ನಾಟಕ

karnataka

ETV Bharat / state

ಕೊಡಗು ಜಿಲ್ಲಾ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷರ ಕಾರಿನ‌ ಮೇಲೆ ಗುಂಡಿನ ದಾಳಿ!

ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷರ ಕಾರಿನ‌ ಮೇಲೆ ಗುಂಡಿನ ದಾಳಿ ನಡೆದಿದೆ.

Firing on Vishwa Hindu Parishad President  Firing on Vishwa Hindu Parishad President car  Shootout in Madikeri  ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಕಾರಿನ‌ ಮೇಲೆ ಗುಂಡಿನ ದಾಳಿ  ಗುಂಡಿನ ದಾಳಿ ನಡೆದಿರುವ ಘಟನೆ ಕೊಡಗು  ವಕೀಲ ಕೃಷ್ಣ ಮೂರ್ತಿ ಮೇಲೆ ಗುಂಡು ಹಾರಿಸಲು ಯತ್ನ  ಕೆಲಸದ ಮೇಲೆ ಚಟ್ಟಿಳ್ಳಿ ಗ್ರಾಮ  ಕಾರ್​ ಡ್ರೈವ್​ ಮಾಡುತ್ತಿದ್ದ ಕೃಷ್ಣ ಮೂರ್ತಿ
ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಕಾರಿನ‌ ಮೇಲೆ ಗುಂಡಿನ ದಾಳಿ

By

Published : Apr 13, 2023, 11:42 AM IST

Updated : Apr 13, 2023, 1:22 PM IST

ಕೊಡಗು ಜಿಲ್ಲಾ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಹೇಳಿಕೆ

ಕೊಡಗು :ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಕಾರಿನ‌ ಮೇಲೆ ಗುಂಡಿನ ದಾಳಿಯಾಗಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ. ಅಧ್ಯಕ್ಷ ಹಾಗೂ ವಕೀಲ ಕೃಷ್ಣ ಮೂರ್ತಿ ಮೇಲೆ ಗುಂಡು ಹಾರಿಸಲು ಯತ್ನ ನಡೆದಿದ್ದು, ಕೃಷ್ಣಮೂರ್ತಿ ಅವರಿಗೆ ತಗಲುತ್ತಿದ್ದ ಗುಂಡು, ಕಾರಿಗೆ ಬಿದ್ದಿದೆ. ಹೀಗಾಗಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಡಿಕೇರಿ ಸಮೀಪ ಚಟ್ಟಳ್ಳಿ ಬಳಿಯ ಅಬ್ಬಿಯಾಲ ಬಳಿ ಗುಂಡಿನ ದಾಳಿಯಾಗಿದೆ. ಕೆಲಸದ ಮೇಲೆ ಚಟ್ಟಿಳ್ಳಿ ಗ್ರಾಮಕ್ಕೆ ತೆರಳಿದ್ದು, ಕೆಲಸ ಮುಗಿಸಿ ಮತ್ತೆ ಮಡಿಕೇರಿಗೆ ಒಬ್ಬರೇ ಕಾರ್ ಡ್ರೈವ್ ಮಾಡಿಕೊಂಡು ವಾಪಸಾಗುತ್ತಿದ್ದರು. ಅಭ್ಯಾಲ ಎಂಬ ಸ್ಥಳದಲ್ಲಿ ಕಾರ್ ತಿರುವಿನ ವೇಳೆ ಗುಂಡಿನ ದಾಳಿ ನಡೆದಿದೆ.

ಇನ್ನು ಡ್ರೈವ್ ಮಾಡುತ್ತಿದ್ದ ಕೃಷ್ಣ ಮೂರ್ತಿ ಅವರ ಮೇಲೆ ಗುಂಡು ಹಾರಿಸಲಾಗಿದೆ. ಆದ್ರೆ ಗುಂಡು ಪಕ್ಕದ ಡೋರ್​ಗೆ ಬಿದ್ದಿದ್ದು, ಕಾರ್​ ಡ್ರೈವ್​ ಮಾಡುತ್ತಿದ್ದ ಕೃಷ್ಣ ಮೂರ್ತಿ ಅವರಿಗೆ ಯಾವುದೇ ರೀತಿಯಲ್ಲಿ ಗಾಯಗಳಾಗಿಲ್ಲ. ಗುಂಡಿನ ದಾಳಿ ನಡೆಯುತ್ತಿದ್ದಂತೆ ಕೃಷ್ಣ ಮೂರ್ತಿ ಕಾರನ್ನು ನಿಲ್ಲಿಸದೇ ಡ್ರೈವ್ ಮಾಡಿಕೊಂಡು‌ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿದ್ದಾರೆ. ಬಳಿಕ ನಡೆದ ಘಟನೆ ಬಗ್ಗೆ ದೂರು ನೀಡಿದ್ದಾರೆ.

ಸ್ಥಳಕ್ಕೆ ಎಸ್ಪಿ ರಾಮರಾಜನ್ ನೇತೃತ್ವದಲ್ಲಿ ಪೊಲೀಸರು ಭೇಟಿ ನೀಡಿದ್ದು, ಗುಂಡು ಹಾರಿದ ಸ್ಥಳವನ್ನು ಪರಿಶೀಲನೆ ಮಾಡಿದರು. ಬಳಿಕ ಈ ಘಟನೆ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಚುನಾವಣಾ ಸಮಯದಲ್ಲಿ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷನ‌ ಕಾರಿನ‌ ಮೇಲೆ ದಾಳಿ‌ಯಿಂದ ಕೊಡಗಿನಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಜಿಲ್ಲೆಯ ಪೊಲೀಸ್ ಕಟ್ಟೆಚ್ಚರ ವಹಿಸಿದೆ.

ಓದಿ:ಬಠಿಂಡಾ ಸೇನಾ ನೆಲೆ ಮೇಲೆ ದಾಳಿ: ಮತ್ತೊಬ್ಬ ಯೋಧ ಸಾವು, ಮೃತರ ಸಂಖ್ಯೆ 5 ಕ್ಕೇರಿಕೆ

Last Updated : Apr 13, 2023, 1:22 PM IST

ABOUT THE AUTHOR

...view details