ಕರ್ನಾಟಕ

karnataka

ETV Bharat / state

ಬಾಳೆ ದಿಂಡಿನ ಜೊತೆ ವಿವಾಹ ನಂತ್ರ ಸ್ವಗ್ರಾಮದಲ್ಲಿ ಕಿರುತೆರೆ ನಟಿ ಸೌಜನ್ಯ ಮಾದಪ್ಪ ಅಂತ್ಯಕ್ರಿಯೆ - ನಟಿ ಸೌಜನ್ಯ ಮಾದಪ್ಪ

ಸೆಪ್ಟೆಂಬರ್‌ 30 ರಂದು ಬೆಂಗಳೂರಿನಲ್ಲಿ ಡೆತ್‌ ನೋಟ್‌ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದ ಕಿರುತೆರೆ ನಟಿ ಸೌಜನ್ಯ ಮಾದಪ್ಪ ಅಂತ್ಯಕ್ರಿಯೆಯನ್ನು ಅವರ ಹುಟ್ಟೂರಾದ ಸುಂಟಿಕೋಪ್ಪ ಸಮೀಪದ ಅಂದಗೋವೆಯಲ್ಲಿ ನೆರವೇರಿಸಲಾಯಿತು.

Final funeral of tv actress savi madappa in Kodagu district
ಬಾಳೆ ದಿಂಡಿನ ಜೊತೆ ವಿವಾಹ ನಂತ್ರ ಸ್ವಗ್ರಾಮದಲ್ಲಿ ಕಿರುತೆರೆ ನಟಿ ಸೌಜನ್ಯ ಮಾದಪ್ಪ ಅಂತ್ಯಕ್ರಿಯೆ

By

Published : Oct 2, 2021, 1:24 AM IST

Updated : Oct 2, 2021, 7:34 AM IST

ಮಡಿಕೇರಿ(ಕೊಡಗು): ಬೆಂಗಳೂರಿನ ತನ್ನ ಅಪಾರ್ಟ್​ಮೆಂಟ್​ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ ಕಿರುತೆರೆ ನಟಿ ಸೌಜನ್ಯ ಮಾದಪ್ಪ ಅಂತ್ಯಕ್ರಿಯೆ ಅವರ ಹುಟ್ಟೂರಾದ ಕೊಡಗಿನ ಸುಂಟಿಕೋಪ್ಪ ಸಮೀಪದ ಅಂದಗೋವೆಯಲ್ಲಿ ಕೊಡವ ಸಾಂಪ್ರದಾಯದಂತೆ ನಡೆಯಿತು.

ಇದಕ್ಕೂ ಮುನ್ನ ಮೃತ ದೇಹ ಸ್ವಗ್ರಾಮಕ್ಕೆ ಅಗಮಿಸುತ್ತಿದ್ದಂತೆ ಗ್ರಾಮಸ್ಥರು ಹಾಗೂ ಕುಟುಂಬ ಸದಸ್ಯರು ಆಕ್ರಂದನ ಮುಗ್ಗಿಲು ಮುಟ್ಟಿತು. ನಟಿ ಸೌಜನ್ಯ ಮೃತ ದೇಹವನ್ನು ಚಿಕ್ಕಂಡ ಕುಟುಂಬದ ಐನ್ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅವಿವಾಹಿತಳಾಗಿದ್ದ ಕಾರಣ ಕೊಡವ ಸಾಂಪ್ರದಾಯದಂತೆ ಗಾಳಿಯಲ್ಲಿ ಗುಂಡು ಹಾರಿಸಿ, ಮೃತದೇಹಕ್ಕೆ ಹೊಸ ಸೀರೆ, ಕಾಲುಂಗುರ ತೊಡಿಸಿ ಅಲಂಕರಿಸಿ ಬಾಳೆ ಕಂಬದೊಂದಿಗೆ ವಿವಾಹ ಮಾಡಲಾಯಿತು. ನಂತರ ಅಂತ್ಯಕ್ರಿಯೆಯ ವಿಧಿವಿಧಾನಗಳನ್ನು ನೆರವೇರಿಸಿದರು.

ನಟಿ ಸೌಜನ್ಯ ಮಾದಪ್ಪ ಅಂತ್ಯಕ್ರಿಯೆ

ಈ ವೇಳೆ ಪ್ರತಿಕ್ರಿಯಿಸಿ ಮೃತಳ ತಂದೆ ಪ್ರಭು ಮಾದಪ್ಪ, ಮಗಳು ಬೆಂಗಳೂರಿನಲ್ಲಿ ಇದ್ದಾಗ ವಿವೇಕ್ ಪರಿಚಯವಾಗಿ, ಮಗಳನ್ನು ವಿವಾಹವಾಗುವುದಾಗಿ ಒತ್ತಾಯ ಮಾಡುತಿದ್ದ. ನನ್ನ ಮಗಳ ಸ್ನೇಹ ಬೆಳಸಲು ವಿವೇಕ್ ಯಾರು?, ಮಗಳನ್ನು ವಿವಾಹವಾಗಲು ಅವನ ಹಿನ್ನೆಲೆ ಏನು?, ಆಕೆಯ ಬ್ರೈನ್ ವಾಶ್ ಮಾಡಿ ಕಿರುಕುಳ ಕೊಟ್ಟು ಸಾಯಿಸಿದ್ದಾನೆ ಎಂದು ಗಂಭೀರ ಆರೋಪ ಮಾಡಿದರು.

ದೊಡ್ಡ ಮಗಳ‌ ಮದುವೆಯಾಗಿ ಒಂದು‌ ತಿಂಗಳಾಗಿದೆ. ಈಗಲೇ ಮತ್ತೊಂದು ಮದುವೆ ಹೇಗೆ‌ ಸಾಧ್ಯ?, ನನ್ನ ಮಗಳನ್ನು ಮದುವೆಯಾಗುವಂತೆ ಬಲವಂತ ಮಾಡುತ್ತಿದ್ದ ವಿವೇಕ್‌, ಮಗಳ ಬಳಿ ಇದ್ದ ಹಣವನ್ನು ಎಲ್ಲಿಯೋ ಹೂಡಿಕೆ ಮಾಡಿದ್ದಾರೆ. ಮಗಳ ಸಾವಿನ ಬಗ್ಗೆ ತನಿಖೆಯಾಗಬೇಕು ಎಂದು ಸವಿ ಮಾದಪ್ಪ ತಂದೆ ಪ್ರಭು ಮಾದಪ್ಪ ಹೇಳಿದ್ದಾರೆ.

ಇದನ್ನೂ ಓದಿ:ಡೆತ್​ನೋಟ್​ ಬರೆದಿಟ್ಟು ನಟಿ ಸೌಜನ್ಯ ಆತ್ಮಹತ್ಯೆ

Last Updated : Oct 2, 2021, 7:34 AM IST

ABOUT THE AUTHOR

...view details