ಕರ್ನಾಟಕ

karnataka

ETV Bharat / state

ಪುತ್ರ ನಿಂದಿಸಿದ ಎಂದು ನೇಣಿಗೆ ಶರಣಾದ ತಂದೆ.. ಸಾವಿನ ಸುದ್ದಿ ಕೇಳಿ ಕೆರೆಗೆ ಹಾರಿದ ಮಗ! - ಆತ್ಮಹತ್ಯೆ ಮಾಡಿಕೊಂಡ ತಂದೆ ಮಗ

ಬಿಳಗುಂದ ಗ್ರಾಮದಲ್ಲಿ ತಂದೆ ಹಾಗೂ ಮಗ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

father and son committed suicide at madikeri
ಬಿಳಗುಂದ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡ ತಂದೆ ಮಗ

By

Published : Mar 9, 2022, 2:25 PM IST

Updated : Mar 9, 2022, 4:59 PM IST

ಮಡಿಕೇರಿ: ಪುತ್ರ ನಿಂದಿಸಿದ ಎಂದು ತಂದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ತಂದೆ ಸಾವಿನ ಸುದ್ದಿ ಕೇಳಿ ಪುತ್ರನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.

ಬಿಳಗುಂದ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡ ತಂದೆ ಮಗ, ಸ್ಥಳೀಯರ ಮಾಹಿತಿ

ವಿರಾಜಪೇಟೆ ತಾಲೂಕಿನ ಬಿಳಗುಂದ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ತಂದೆ ಹಾಗೂ ಮಗ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಂದೆ ಸುಬ್ಬಯ್ಯ (75) ಹಾಗೂ ಪುತ್ರ ಗಿರೀಶ್ ಗಣಪತಿ (36) ಆತ್ಮಹತ್ಯೆ ಮಾಡಿಕೊಂಡ ಅಪ್ಪ ಮಗ. ಮಂಗಳವಾರ ತಂದೆ ಮಗನ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಮಾತಿನ ಚಕಮಕಿ ಏರ್ಪಟ್ಟಿತ್ತು ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ಗಂಡನ ಅನುಮಾನಕ್ಕೆ ಬೇಸತ್ತ ಮಹಿಳೆ.. ವಿಚ್ಛೇದನಕ್ಕೆ ಮುಂದಾದ ಪತ್ನಿ ಕೊಂದ ಪತಿ ಅರೆಸ್ಟ್

ಪುತ್ರ ನಿಂದಿಸಿದ ಎಂಬ ಕಾರಣಕ್ಕೆ ತಂದೆ ಸುಬ್ಬಯ್ಯ ನೇಣಿಗೆ ಶರಣಾಗಿದ್ದಾರೆ. ತಂದೆ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಕೇಳುತ್ತಿದ್ದಂತೆ ಪುತ್ರ ಗಿರೀಶ್ ತೋಟದ ಕೆರೆಗೆ ಹಾರಿ ಪ್ರಾಣ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ. ವಿರಾಜಪೇಟೆ ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Last Updated : Mar 9, 2022, 4:59 PM IST

ABOUT THE AUTHOR

...view details