ಕೊಡಗು: ಕೊಡಗಿನಲ್ಲಿ ಹಾಕಿ ಪಂದ್ಯಾಟಕ್ಕೆ ಕಾಯಕಲ್ಪ ನೀಡಲು ಕೊಡವ ಕುಟುಂಬಗಳ ನಡುವೇ ಹಾಕಿ ಪಂದ್ಯಾಟ ಆಯೋಜಿಸಿದ್ದ ಪಾಂಡಂಡ ಕುಟ್ಟಪ್ಪ ಇಂದು ತಮ್ಮ ಬೆಂಗಳೂರು ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
ಕೊಡಗು: 'ಕೌಟುಂಬಿಕ ಹಾಕಿ' ಜನಕ ಇನ್ನಿಲ್ಲ...! - Pandada kuttappa
ಕೊಡವ ಕುಟುಂಬಗಳ ನಡುವೇ ಹಾಕಿ ಪಂದ್ಯಾಟ ಆಯೋಜಿಸಿದ್ದ 'ಕೌಟುಂಬಿಕ ಹಾಕಿ' ಜನಕ ಪಾಂಡಂಡ ಕುಟ್ಟಪ್ಪ ಇಂದು ತಮ್ಮ ಬೆಂಗಳೂರು ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
![ಕೊಡಗು: 'ಕೌಟುಂಬಿಕ ಹಾಕಿ' ಜನಕ ಇನ್ನಿಲ್ಲ...! Family hockey founder Pandada kuttappa is no more](https://etvbharatimages.akamaized.net/etvbharat/prod-images/768-512-7097582-thumbnail-3x2-news.jpg)
ಕರಡದಲ್ಲಿ 1997ರಲ್ಲಿ ಆಯೋಜಿಸಲಾಗಿದ್ದ ಮೊದಲ ಹಾಕಿ ಪಂದ್ಯಾಟವು ಒಲಂಪಿಕ್ಸ್ ಮಾದರಿಯಲ್ಲಿಯೇ ವಿಶ್ವದಾದ್ಯಂತ ಗಮನ ಸೆಳೆದಿತ್ತು. ಕುಟ್ಟಪ್ಪನವರ ಆಶಯದಂತೆ ಅವರ ಮಾರ್ಗದರ್ಶನದಲ್ಲಿ ಕಳೆದ 22 ವರ್ಷಗಳಿಂದ ಪ್ರತೀ ವರ್ಷ ಕೊಡವ ಕೌಟುಂಬಿಕ ಹಾಕಿ ನಡೆದುಕೊಂಡು ಬರುತ್ತಿದೆ. ಹಿಂದಿನ ವರ್ಷ ಪಾಕೃತಿಕ ಮುನಿಸಿಸು ಹಾಗೂ ಈ ವರ್ಷ ಕೊರೊನಾ ಹಾವಳಿಯಿಂದಾಗಿ ಪಂದ್ಯಾವಳಿಗಳು ನಡೆದಿಲ್ಲ.
ಎಸ್ಬಿಐ ನ ನಿವೖತ್ತ ಮ್ಯಾನೇಜರ್ ಆಗಿದ್ದ ಪಾಂಡಂಡ ಕುಟ್ಟಪ್ಪ ಕೊಡವ ಹಾಕಿ ಪಂದ್ಯಾವಳಿಗಾಗಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿಯೂ ಸ್ಥಾನ ಪಡೆದಿದ್ದರು. ಇಂದು ಕೊನೆಯುಸಿರೆಳೆದಿರುವ ಕುಟ್ಟಪ್ಪ ಅವರ ಅಂತ್ಯಕ್ರಿಯೆ ಬೆಂಗಳೂರಿನಲ್ಲೇ ನಡೆಯಲಿದೆ ಎಂದು ತಿಳಿದು ಬಂದಿದೆ.