ಕೊಡಗು:ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಪ್ರತ್ಯೇಕವಾಗಿ ಎರಡು ತಾಲೂಕಿನಲ್ಲಿ ಆನೆಗಳ ಹಿಂಡು ರಸ್ತೆ ದಾಟುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.
ಕೊಡಗಿನಲ್ಲಿ ಕಾಡಾನೆ ಹಿಂಡು ಪ್ರತ್ಯಕ್ಷ: ಆತಂಕದಲ್ಲಿ ಸ್ಥಳೀಯರು - ಕೊಡಗು ಜಿಲ್ಲೆಯಲ್ಲಿ ಕಾಡಾನೆ ಹಿಂಡು ಪ್ರತ್ಯಕ್ಷ ಆತಂಕದಲ್ಲಿ ಸ್ಥಳೀಯರು
ಕೊಡಗಿನಲ್ಲಿ ಕಾಡಾನೆ ದಾಂಧಲೆ ಹೆಚ್ಚಾಗುತ್ತಿದ್ದು ಜನರು ಆತಂಕದಲ್ಲಿ ಜೀವನ ಮಾಡುತ್ತಿದ್ದಾರೆ. ನಿನ್ನೆ ಪೊನ್ನಪೇಟೆ ತಾಲೂಕಿನ ಅರವತೊಕ್ಲು ಗ್ರಾಮದ ರಂಗಸ್ವಾಮಿ ಆನೆ ದಾಳಿಗೆ ಬಲಿಯಾಗಿದ್ದರು. ಇಂದು ಪೊನ್ನಪೇಟೆ ರಸ್ತೆಯ ಪಕ್ಕದ ಕಾಫಿ ತೋಟದಲ್ಲಿ 10ಕ್ಕೂ ಹೆಚ್ಚು ಆನೆಗಳು ಬೀಡುಬಿಟ್ಟಿವೆ.
ಸೋಮವಾರಪೇಟೆ ತಾಲೂಕಿನ ರಸ್ತೆಯಲ್ಲಿ 20ಕ್ಕೂ ಹೆಚ್ಚು ಆನೆಗಳು ಮತ್ತು ಪೊನ್ನಪೇಟೆ ರಸ್ತೆಯಲ್ಲಿ 10ಕ್ಕೂ ಹೆಚ್ಚು ಆನೆಗಳ ಹಿಂಡು ಕಾಣಿಸಿದ್ದು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಆನೆಗಳು ರಸ್ತೆ ದಾಟುವ ದೃಶ್ಯ ನೋಡಿದ ಜನರು ವಾಹನಗಳನ್ನು ದೂರದಲ್ಲೇ ನಿಲ್ಲಿಸಿ ಆನೆಗಳಿ ಹೋದ ನಂತರ ಜನರು ಹೋಗಿದ್ದಾರೆ.
ಕೊಡಗಿನಲ್ಲಿ ಕಾಡಾನೆ ದಾಂಧಲೆ ಹೆಚ್ಚಾಗುತ್ತಿದ್ದು, ಜನರು ಆತಂಕದಲ್ಲಿ ಜೀವನ ಮಾಡುತ್ತಿದ್ದಾರೆ. ನಿನ್ನೆ ಪೊನ್ನಪೇಟೆ ತಾಲೂಕಿನ ಅರವತೊಕ್ಲು ಗ್ರಾಮದ ರಂಗಸ್ವಾಮಿ ಆನೆ ದಾಳಿಗೆ ಬಲಿಯಾಗಿದ್ದರು. ಇಂದು ಪೊನ್ನಪೇಟೆ ರಸ್ತೆಯ ಪಕ್ಕದ ಕಾಫಿ ತೋಟದಲ್ಲಿ 10ಕ್ಕೂ ಆನೆಗಳು ಬೀಡುಬಿಟ್ಟಿವೆ. ಈ ದೃಶ್ಯವನ್ನು ಸ್ಥಳೀಯರು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಸ್ಥಳಕ್ಕೆ ಆರಣ್ಯ ಅಧಿಕಾರಿಗಳು ಬಂದು ಕಾಫಿ ತೋಟದಿಂದ ಕಾಡಾನೆಗಳನ್ನು ಕಾಡಿಗೆ ಓಡಿಸುವ ಪ್ರಯತ್ನ ಮಾಡುತ್ತಿದ್ದಾರೆ.