ಕೊಡಗು:ಹೃದಯಾಘಾತದಿಂದ ಕಾಡಾನೆ ಮೃತಪಟ್ಟಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಆಹಾರ ಅರಸಿ ಕಾಡನಿಂದ ನಾಡಿಗೆ ಬಂದ ಕಾಡಾನೆ ಪೊನ್ನಪೇಟೆ ತಾಲೂಕಿನ ದನುಗಾಲ ಗ್ರಾಮದ ಕಾಫಿತೋಟದಲ್ಲಿ ಸಾವನ್ನಪ್ಪಿದೆ.
ಹೃದಯಾಘಾತ: ಆಹಾರ ಅರಸಿ ಬಂದಿದ್ದ ಕಾಡಾನೆ ಸಾವು - ಕಾಡಾನೆ ಸಾವು
ಆಹಾರ ಅರಸಿ ನಾಡಿಗೆ ಬಂದಿದ್ದ ಕಾಡಾನೆ ಹೃದಯಾಘಾತದಿಂದ ಮೃತಪಟ್ಟಿದೆ ಎಂದು ತಿಳಿದುಬಂದಿದೆ.
18 ರಿಂದ 20 ವಯಸ್ಸಿನ ಕಾಡಾನೆ ಕಾಫಿತೋಟದಲ್ಲಿ ಹೃದಯಾಘಾತದಿಂದ ಮೃತಪಟ್ಟಿದೆ. ದೇಹದ ಮೇಲೆ ಯಾವುದೇ ಗಾಯಗಳು ಆಗಿಲ್ಲ. ತಡರಾತ್ರಿ ಕಾಫಿತೋಟದಲ್ಲಿ ಆನೆ ಗೀಳಿಡುತ್ತಿತ್ತು. ಭಯದಲ್ಲಿ ಯಾರು ಹತ್ತಿರಕ್ಕೆ ಹೋಗಲಿಲ್ಲ. ಸ್ವಲ್ಪ ಸಮಯದ ನಂತರ ಕೂಗಾಟ ಕಡಿಮೆಯಾಯಿತು. ಬೆಳಿಗ್ಗೆ ಬಂದು ನೋಡಿದಾಗ ಆನೆ ಸಾವನ್ನಪ್ಪಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಅರಣ್ಯಧಿಕಾರಿಗಳು ಬಂದು ಪರಿಶೀಲನೆ ಮಾಡಿದ್ದಾರೆ. ಕಾಡಾನೆಗಳು ಮತ್ತು ಮಾನವ ಸಂಘರ್ಷ ಹೆಚ್ಚಾಗಿದೆ. ಪೊನ್ನಪೇಟೆ ಭಾಗದಲ್ಲಿ ಆನೆಗಳ ಕಾಟ ಹೆಚ್ಚಾಗಿದೆ. ಕಾಡಿನಿಂದ ನಾಡಿಗೆ ಬರುವುದನ್ನ ಅರಣ್ಯ ಇಲಾಖೆ ತಡೆಯಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.