ಕಾರ್ಯಾಚರಣೆ ವೇಳೆ 35 ಅಡಿ ಗುಂಡಿಗೆ ಬಿದ್ದು ಕಾಡಾನೆ ಸಾವು ಮಡಿಕೇರಿ (ಕೊಡಗು) :ಕಾಡಾನೆ ಸೆರೆಹಿಡಿಯುವ ವೇಳೆ ಕಾಡಾನೆ ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಅತ್ತೂರು-ನಲ್ಲೂರು ಗ್ರಾಮದಲ್ಲಿ ಘಟನೆ ನಡೆದಿದೆ. ಆನೆಗೆ ಅಂದಾಜು 20 ವರ್ಷ ವಯಸ್ಸಾಗಿತ್ತು ಎನ್ನಲಾಗಿದೆ. ಅರವಳಿಕೆ ನೀಡಿದ ಬಳಿಕ ಆನೆ ಓಡಲು ಶುರು ಮಾಡಿತ್ತು. ಆಗ ಕಾಫಿ ತೋಟದಲ್ಲಿ ಇದ್ದ 35 ಅಡಿ ಆಳದ ಸಿಮೆಂಟ್ ಅಂಗಳಕ್ಕೆ ಬಿದ್ದು ಆನೆ ಸಾವನ್ನಪ್ಪಿದೆ. ದೇಹದಲ್ಲಿ ಆಂತರಿಕ ಗಾಯಗಳಾಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಮೃತ ಕಾಡಾನೆ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ.
ಬೆಳಗ್ಗೆಯಿಂದ ಕಾಡಾನೆ ಸೆರೆ ಕಾರ್ಯಾಚರಣೆ ನಡೆಯುತ್ತಿತ್ತು. ಸ್ಥಳಕ್ಕೆ ಹಿರಿಯ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಕುಶಾಲನಗರ ಸಮೀಪದ ಆನೆಕಾಡು ಸಮೀಪದ ಮಿನುಕೊಲ್ಲಿ ಅರಣ್ಯ ವ್ಯಾಪ್ತಿಯಲ್ಲಿ ಪುಂಡಾಟ ಮೆರೆದಿದ್ದ ಕಾಡಾನೆ ಸೆರೆ ಹಿಡಿಯುವ ವೇಳೆ ಈ ಘಟನೆ ನಡೆದಿದೆ. ಕಾಡಾನೆ ಸಾವಿಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಫಿ ತೋಟದಲ್ಲಿ ಆನೆಗೆ ಅರವಳಿಕೆ ಮದ್ದು ನೀಡಿ ಕೆಲ ಹೊತ್ತಿನಲ್ಲಿ ಗುಂಡಿಗೆ ಬಿದ್ದು ಕಾಡಾನೆ ಸಾವನ್ನಪ್ಪಿದೆ.
ಕಾಫಿ ತೋಟಗಳಿಗೆ ನುಗ್ಗಿ ದಾಳಿ: ಮನುಷ್ಯರ ಮೇಲೆ ದಾಳಿ ಮಾಡಿ ದಾಂಧಲೆ ಮಾಡುತ್ತಿದ್ದ ಕಾಡಾನೆಗಳನ್ನು ಸೆರೆಹಿಡಿಯಲು ಸರ್ಕಾರದ ಅನುಮತಿ ಪಡೆದು ಅವುಗಳನ್ನು ಸೆರೆ ಹಿಡಿಯಲಾಗುತ್ತದೆ. ಅಂತೆಯೇ ಕುಶಾಲನಗರ ಸುತ್ತಮುತ್ತಲಿನ ಆನೆ ಕಾಡು ಮತ್ತು ಮೀನು ಕೊಲ್ಲಿ ಭಾಗದ ಕಾಫೀ ತೋಟದಲ್ಲಿ ದಾಂದಲೆ ಮಾಡುತ್ತ ಮನುಷ್ಯರ ಮೇಲೆ ದಾಳಿ ಮಾಡಿದ ಕಾಡಾನೆ ಸೆರೆಗೆ ಅರಣ್ಯ ಇಲಾಖೆ ಮುಂದಾಗಿತ್ತು. ಆಗ ಆನೆಯನ್ನು ಗುರುತು ಮಾಡಿ ಅರವಳಿಕೆ ಮದ್ದು ನೀಡಿ ಮೂರು ಸಾಕಾನೆಗಳ ಸಹಾಯದಿಂದ ಆನೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಮುಂದಾಗಿತ್ತು.
ಪ್ರಾಣಿ ಪ್ರಿಯರಿಂದ ಅಸಮಾಧಾನ: ಅರವಳಿಕೆ ನೀಡಿದ ನಂತರ ಆನೆ ಓಡಿ ಗುಂಡಿಗೆ ಬಿದ್ದಿದೆ. ನಂತರ ಸ್ಥಳದಲ್ಲಿದ್ದ ವೈದ್ಯರು ಆನೆಯನ್ನು ತಪಾಸಣೆ ನಡೆಸಿ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ. ಆದರೆ, ಆನೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಕಾಡಿನ ನಡುವೆ ಆನೆ ಸಾವನ್ನಪ್ಪಿದೆ. ಇದರಿಂದ ಆನೆಗೆ ಹೈಡೋಸ್ ಕೊಟ್ಟು ಅರಣ್ಯ ಇಲಾಖೆ ಸಾಯಿಸಿದೆ ಎಂದು ಸ್ಥಳೀಯರು ಮತ್ತು ಪ್ರಾಣಿ ಪ್ರಿಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅರಣ್ಯ ಇಲಾಖೆ ಸಿಬ್ಬಂದಿ ಕೂಂಬಿಂಗ್: ಈ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ಮಿತಿ ಮೀರಿದ್ದ ಹಿನ್ನೆಲೆ ಕಳೆದ ಒಂದು ವಾರದಿಂದ ಅರಣ್ಯ ಇಲಾಖೆ ಸಿಬ್ಬಂದಿ ಕೂಂಬಿಂಗ್ ನಡೆಸುತ್ತಿದ್ದರು. ಮೂರು ದಿನಗಳಿಂದ ನಡೆಯುತ್ತಿರುವ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಇತ್ತೀಚೆಗಷ್ಟೇ ಒಂದು ಕಾಡಾನೆಯನ್ನು ಸೆರೆ ಹಿಡಿಯಲಾಗಿತ್ತು. ಎಂದಿನಂತೆ ಮಂಗಳವಾರ ಕೂಡಾ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಈ ಸಂದರ್ಭ ಸೆರೆ ಹಿಡಿಯಲು ನಿರ್ಧರಿಸಿದ್ದ ಅರವಳಿಕೆ ಚುಚ್ಚುಮದ್ದು ಡಾಟ್ ಮಾಡಲಾಗಿತ್ತು. ಸ್ಥಳದಿಂದ ಸ್ವಲ್ಪ ದೂರ ಓಡಿದ ಕಾಡಾನೆ ಬಳಿಕ ಅನತಿ ದೂರದಲ್ಲಿ ಗುಂಡಿಗೆ ಬಿದ್ದಿದೆ.
ಆಹಾರ ಅರಸಿ ನಾಡಿಗೆ ಬರುವ ಕಾಡಾನೆಗಳು ವಿದ್ಯುತ್ ಸ್ಪರ್ಶದಿಂದ ಮತ್ತು ಹೊಂಡಗಳಿಗೆ ಬಿದ್ದು ಕೆಸರಿನಲ್ಲಿ ಸಿಲುಕಿ ಸಾವನ್ನಪ್ಪುತ್ತವೆ. ಇಲ್ಲವೇ ಇಂತಹ ಘಟನೆಗಳಿಂದ ಆನೆಗಳು ಸಾವನ್ನಪ್ಪುತ್ತವೆ. ಮನುಷ್ಯರ ಮೇಲೆ ದಾಳಿ ನಡೆಸಿ ಸಾಯಿಸುತ್ತಿವೆ. ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಕಾಡು ಪ್ರಾಣಿಗಳು ಮತ್ತು ಮನುಷ್ಯ ಸಂಘರ್ಷ ನಡೆಯುತ್ತಿದೆ. ಆಹಾರ ಅರಸಿ ಬರುವ ಕಾಡಾನೆಗಳು ಮನುಷ್ಯರ ಮೇಲೆ ದಾಳಿ ಮಾಡಿ ಸಾಯಿಸಿದ್ರೆ. ಕಾಡಾನೆಗಳು ಕೂಡ ಕಾಫಿ ತೋಟಕ್ಕೆ ಬಂದು ವಿದ್ಯುತ್ ತಂತಿ ತಗುಲಿ ಸಾಯುತ್ತಿವೆ. ಇಲ್ಲ ಇಂತಹ ಘಟನೆಗಳಿಂದ ಸಾಯುತ್ತಿವೆ.
ಓದಿ:ಹುಣಸೂರಿನಲ್ಲಿ ಮಹಿಳೆ ಬಲಿ ಪಡೆದಿದ್ದ ವಕ್ರದಂತ ಕೊನೆಗೂ ಸೆರೆ