ಮಡಿಕೇರಿ(ಕೊಡಗು):ಆನೆ ಸೆರೆ ಹಿಡಿಯುವ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಹೈಡೋಸೇಜ್ ಇಂಜೆಕ್ಷನ್ ನೀಡಿದ ಪರಿಣಾಮ 13 ವರ್ಷದ ಕಾಡಾನೆ ಮೃತಪಟ್ಟಿರುವ ಆರೋಪ ಘಟನೆ ಜಿಲ್ಲೆಯ ಚೆಯ್ಯಂಡಾಣೆ ಸಮೀಪದ ಮರಂದೋಡು ಗ್ರಾಮದಲ್ಲಿ ನಡೆದಿದೆ. ಇದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮರಂದಡು ಗ್ರಾಮದ ವಿಜಯ್‌ನಂಜಪ್ಪ ಅವರ ಕಾಫಿ ತೋಟದಲ್ಲಿ ಘಟನೆ ನಡೆದಿದೆ. ದಾಂಧಲೆ ಮಾಡುತ್ತಿದ್ದ ಕಾಡಾನೆಗಳನ್ನು ಸರ್ಕಾರದ ಅನುಮತಿ ಪಡೆದು ಸೆರೆ ಹಿಡಿಯಲಾಗುತ್ತದೆ. ಅಂತೆಯೇ ಗ್ರಾಮದ ಕಾಫಿ ತೋಟದಲ್ಲಿ ದಾಳಿ ಮಾಡಿ ದಾಂಧಲೆ ಮಾಡುತ್ತಿದ್ದ ಹೆಣ್ಣಾನೆಗೆ ಅರವಳಿಕೆ ಮದ್ದು ನೀಡಿ ಮೂರು ಸಾಕಾನೆಗಳ ಸಹಾಯದಿಂದ ಸೆರೆಹಿಡಿದು ಎಳೆದುಕೊಂಡು ಹೋಗುವಾಗ ಆನೆ ಕುಸಿದುಬಿದ್ದಿದೆ.