ಸೋಮವಾರಪೇಟೆ (ಕೊಡಗು): ಕಾಫಿ ತೋಟಕ್ಕೆ ಆಹಾರ ಅರಸಿ ಬಂದ ಕಾಡಾನೆಯೊಂದು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿರುವ ಘಟನೆ ತಾಲೂಕಿನ 7 ನೇ ಹೊಸಕೋಟೆ ಬಳಿ ನಡೆದಿದೆ.
ವಿದ್ಯುತ್ ಸ್ಪರ್ಶ: ಸೋಮವಾರಪೇಟೆಯಲ್ಲಿ ಕಾಡಾನೆ ಸಾವು..! - elephant death in kodagu
ಕಾಫಿ ತೋಟದ ವಿದ್ಯುತ್ ಬೇಲಿಗೆ ಸ್ಪರ್ಶಿಸಿದ ಕಾಡಾನೆಯೊಂದು ಮೃತಪಟ್ಟಿರುವ ಘಟನೆ ಸೋಮವಾರಪೇಟೆಯಲ್ಲಿ ನಡೆದಿದೆ.
ಕಾಡಾನೆ ಸಾವು
ಸುಮಾರು 13 ವರ್ಷದ ಗಂಡಾನೆ ಸಾವನ್ನಪ್ಪಿದ್ದು, ಕಾಫಿ ತೋಟದ ಸುತ್ತಲೂ ಅಳವಡಿಸಿದ್ದ ವಿದ್ಯುತ್ ಬೇಲಿಗೆ ಸ್ಪರ್ಶಿಸಿದ ಪರಿಣಾಮ ಈ ದುರ್ಘಟನೆ ನಡೆದಿದೆ. ಎರಡು ದಿನಗಳ ಹಿಂದೆಯೇ ಆನೆ ಮೃತಪಟ್ಟಿರಬಹುದು ಎಂದು ಅಂದಾಜಿಸಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಘಟನಾ ಸ್ಥಳಕ್ಕೆ ಆರ್‌ಎಫ್‌ಒ ಅನಿಲ್ ಡಿಸೋಜಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಾರದ ಹಿಂದಷ್ಟೇ ಪೊನ್ನಂಪೇಟೆಯ ಮಂಚಳ್ಳಿಯಲ್ಲಿ ವಿದ್ಯುತ್ ಸ್ಪರ್ಶಕ್ಕೆ ಕಾಡಾನೆ ಮೃತಪಟ್ಟಿತ್ತು.