ಕರ್ನಾಟಕ

karnataka

ETV Bharat / state

ಆಹಾರ ಅರಸಿ ನಾಡಿಗೆ ಬಂದ ಕಾಡಾನೆ: ವಿದ್ಯುತ್ ತಂತಿ ತಗುಲಿ ಸಾವು - ಕೊಡಗಿನಲ್ಲಿ ಆನೆ ಸಾವು

ಬಾಡಗ ಗ್ರಾಮದ ಜಯರಾಮ್ ಎಂಬುವರ ಕಾಫಿ ತೋಟದಲ್ಲಿ ಕಾಡಾನೆಯೊಂದು ಮೃತಪಟ್ಟಿದೆ.

ಕಾಡಾನೆ
ಕಾಡಾನೆ

By

Published : Jul 2, 2022, 4:01 PM IST

ಕೊಡಗು:ವಿರಾಜಪೇಟೆ ತಾಲೂಕಿನ ಕೆ.ಬಾಡಗ ಗ್ರಾಮದಲ್ಲಿ ವಿದ್ಯುತ್ ಸ್ಪರ್ಶಿಸಿ ಕಾಡಾನೆಯೊಂದು ಸಾವನ್ನಪ್ಪಿದೆ. ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ವೇಳೆ ಕಾಫಿ ತೋಟದಲ್ಲಿ ವಿದ್ಯುತ್ ಬೇಲಿ ತಗುಲಿ ಆನೆ ಸಾವನ್ನಪ್ಪಿದೆ.

ಬಾಡಗ ಗ್ರಾಮದ ಜಯರಾಮ್ ಎಂಬುವರ ಕಾಫಿ ತೋಟದಲ್ಲಿ ರಾತ್ರಿ ವೇಳೆ ಆನೆ ಮೃತಪಟ್ಟಿದೆ. ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀನೆ ನಡೆಸಿದರು.

ಇತ್ತೀಚೆಗಷ್ಟೇ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಹೊಂದಿಕೊಂಡಂತಿರುವ ಬಾಳೆಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಳುಗೋಡುವಿನ ಸಮೀಪದ ಕಾಫಿ ತೋಟದಲ್ಲಿ ಹೆಣ್ಣಾನೆಯೊಂದು ಮೃತಪಟ್ಟಿತ್ತು. ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಹೊಂದಿ ಕೊಂಡಿರುವ ಈ ಪ್ರದೇಶದಲ್ಲಿ ಸಹಜವಾಗಿಯೇ ಕಾಡಾನೆ ಹಾಗೂ ಇತರೆ ವನ್ಯಜೀವಿಗಳು ರೈತ ಭತ್ತದ ಗದ್ದೆ ಹಾಗೂ ಕಾಫಿ ತೋಟಗಳಿಗೆ ಕತ್ತಲಾಗುತ್ತಿದ್ದಂತೆಯೇ ದಾಳಿ ಮಾಡಿ ಬೆಳೆ ನಾಶ ಮಾಡುತ್ತವೆ.

(ಇದನ್ನೂ ಓದಿ: ಮೈಸೂರು: ಆನೆ ಮರಿ ಬೇಟೆಯಾಡಿದ ಹುಲಿ!..)

ABOUT THE AUTHOR

...view details