ಸೋಮವಾರಪೇಟೆ (ಕೊಡಗು): ಆಟೋದಲ್ಲಿ ಹೋಗುತ್ತಿದ್ದವರ ಮೇಲೆ ಏಕಾ ಏಕಿ ಕಾಡಾನೆ ದಾಳಿ ನಡೆಸಿರುವ ಘಟನೆ ಸೋಮವಾರಪೇಟೆ ತಾಲೂಕಿನ ಕಲ್ಲೂರಿನಲ್ಲಿ ನಡೆದಿದೆ.
ಆಟೋದಲ್ಲಿ ಹೋಗುತ್ತಿದ್ದವರ ಮೇಲೆ ಒಂಟಿ ಸಲಗ ದಾಳಿ - ಸೋಮವರಾಪೇಟೆಯಲ್ಲಿ ಆನೆ ದಾಳಿ
ಆಟೋದಲ್ಲಿ ಹೋಗುತ್ತಿದ್ದವರ ಮೇಲೆ ಕಾಡಾನೆ ದಾಳಿ ನಡೆಸಿದ ಘಟನೆ ಸೋಮವಾರಪೇಟೆಯ ಕಲ್ಲೂರಿನಲ್ಲಿ ನಡೆದಿದೆ.
ಆಟೋದಲ್ಲಿ ಹೋಗುತ್ತಿದ್ದವರ ಮೇಲೆ ಒಂಟಿ ಸಲಗ ದಾಳಿ
ಆಟೋ ಚಾಲಕ ಬಾಬು ಎಂಬವರನ್ನು ಒಂಟಿ ಸಲಗ ಅಟ್ಟಾಡಿಸಿದೆ. ಪರಿಣಾಮ ಬಾಬು ಅವರ ಕಾಲು ಮತ್ತು ಬೆನ್ನಿಗೆ ಗಾಯವಾಗಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಆಟೋದಲ್ಲಿದ್ದ ಗೌರಮ್ಮ ಹಾಗೂ ಮಗಳು ಸುಮ ಸುರಕ್ಷಿತವಾಗಿದ್ದಾರೆ. ಕಲ್ಲೂರಿನಿಂದ ಸುಂಟಿಕೊಪ್ಪಕ್ಕೆ ತೆರಳುತ್ತಿದ್ದ ವೇಳೆ ಆನೆ ದಾಳಿ ಮಾಡಿದೆ.