ಕೊಡಗು: ಜಿಲ್ಲೆಯಲ್ಲಿಮತ್ತೆ ಭೂಕಂಪನದ ಅನುಭವವಾಗಿದೆ. ಎರಡು ದಿನದ ಹಿಂದೆ ಅಂದರೆ ಜೂ.23 ನೇ ತಾರೀಖಿನಂದು ಕೊಡಗು, ಹಾಸನ ಗಡಿಭಾಗಗಳು ಹಾಗೂ ಸೋಮವಾರಪೇಟೆಯ, ನೇಗಳೆ, ರೆಂಜರ್ ಬ್ಲಾಕ್ನಲ್ಲಿ ಭೂ ಕಂಪನವಾಗಿತ್ತು. ಇಂದು ಮತ್ತೆ ಕೂಡ ಭೂಕಂಪನದ ಸಂಭವಿಸಿದೆ. ಇದು ಜಿಲ್ಲೆಯ ಜನತೆಯನ್ನ ಬೆಚ್ಚಿಬೀಳಿಸಿದೆ.
ಶನಿವಾರ ಬೆಳಗ್ಗೆ 9.15 ರ ಸುಮಾರಿಗೆ ಜಿಲ್ಲೆಯ ಕರಿಕೆ, ಪೆರಾಜೆ, ಸಂಪಾಜೆ, ಸುತ್ತಮುತ್ತ ಭೂಮಿ ಕಂಪಿಸಿದೆ. ಅಲ್ಲದೆ ಮನೆಯಲ್ಲಿದ್ದ ಪಾತ್ರೆಗಳು ಕೂಡ ಕಂಪಕದ ತೀವ್ರತೆಗೆ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆಯಂತೆ. ತೋಟದ ಕೆಲಸಕ್ಕೆ ಹೋದವರಿಗೂ ಇದರ ಅನುಭವವಾಗಿದೆ. ಅಲ್ಲದೆ ದಕ್ಷಿಣ ಜಿಲ್ಲೆಯ ಗೂನಡ್ಕದಲ್ಲೂ 3/4 ಸೆಕೆಂಡ್ ಕಂಪನವಾಗಿದ್ದು, ಗ್ರಾಮ ಪಂಚಾಯತ್ ಸದಸ್ಯ ಅಬುಶಾಲಿ ಮನೆ ಕೂಡ ಬಿರುಕು ಬಿಟ್ಟಿದೆ. ಜಿಲ್ಲೆಯಲ್ಲಿ 3.4 ತೀವ್ರತೆಯಲ್ಲಿ ಕಂಪನವಾಗಿರೋದು ದೃಢಪಟ್ಟಿದೆ.
2018ರ ಘಟನೆ ನೆನಪಿಸಿದ ಭೂಕಂಪ: ಜಿಲ್ಲೆಯಲ್ಲಿ 2018 ರಲ್ಲೂ ಕೂಡ ಬೆಟ್ಟ ಗುಡ್ಡಗಳು ಕುಸಿತಕ್ಕೂ ಮೊದಲೇ ಕೊಡಗಿನ ಬಹುತೇಕ ಭಾಗದಲ್ಲೂ ಭೂಮಿ ಕಂಪಿಸಿತ್ತು. ಅದಾದ ಕೆಲವೇ ದಿನಗಳಲ್ಲಿ ಜಲ ಪ್ರಳಯವಾಗಿ ಬೆಟ್ಟ ಗುಡ್ಡಗಳು ಕುಸಿದು ಹಲವಾರು ಜನರು ಪ್ರಾಣ ಕಳೆದುಕೊಂಡಿದ್ದರು. ಈ ಭೂ ಕಂಪನದಿಂದ ಜಿಲ್ಲೆಯ ಜನರು ಆತಂಕಗೊಂಡಿದ್ದು, 2018ರ ಘಟನೆ ಮರುಕಳಿಸಲಿದೆಯೇ ಎಂದು ಭಯ ಬಿದ್ದಿದ್ದಾರೆ.