ಕುಶಾಲನಗರ (ಕೊಡಗು) : ದೇಶದಲ್ಲಿ ಲವ್ ಜಿಹಾದ್ ವಿರುದ್ಧ ಕಠಿಣವಾದ ಕಾನೂನು ಜಾರಿಯ ಅಗತ್ಯವಿದ್ದು, ಈ ಕುರಿತು ಚರ್ಚೆ ನಡೆಯುತ್ತಿದೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಹೇಳಿದರು.
ಲವ್ ಜಿಹಾದ್ ವಿರುದ್ಧ ಕಠಿಣ ಕಾನೂನು ತರಲಿದ್ದೇವೆ; ಸಚಿವ ಸದಾನಂದಗೌಡ
ಲವ್ ಜಿಹಾದ್ ವಿರುದ್ಧ ಕಾನೂನು ಜಾರಿ ಸಂಬಂಧ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ತೀರ್ಮಾನಿಸಿದ್ದೇವೆ. ಮುಂದಿನ ದಿನಗಳಲ್ಲಿ ಕಾನೂನು ತರಲಾಗುವುದು ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಹೇಳಿದ್ದಾರೆ.
ಈಗಾಗಲೇ ಅಲಹಾಬಾದ್ ಕೋರ್ಟ್ ಕೂಡ ಲವ್ ಜಿಹಾದ್ ವಿರುದ್ಧ ತೀರ್ಪು ನೀಡಿದೆ. ಕೇವಲ ಮತಾಂತರಕ್ಕಾಗಿ ಹುಡುಗಿಯನ್ನು ಮದುವೆಯಾಗುವುದು ಸರಿಯಲ್ಲ. ಮದುವೆಯಾಗಿ ಒತ್ತಾಯದಿಂದ ಮತಾಂತರ ಮಾಡುವುದು ಸರಿಯಲ್ಲ. ಕಾನೂನು ಜಾರಿ ಸಂಬಂಧ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ತೀರ್ಮಾನಿಸಿದ್ದೇವೆ. ಮುಂದಿನ ದಿನಗಳಲ್ಲಿ ಕಾನೂನು ತರಲಾಗುವುದು ಎಂದರು.
ಉಪಚುನಾವಣೆಯಲ್ಲಿ ಬಿಜೆಪಿ ಅದ್ಭುತ ಗೆಲುವು ಸಾಧಿಸಿದೆ. ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಜನತೆ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ. ಮಣಿಪುರ, ತೆಲಂಗಾಣದಲ್ಲಿ ನಾವು ಗೆಲ್ಲುವುದು ಅಷ್ಟು ಸುಲಭವಾಗಿರಲಿಲ್ಲ. ಆದರೂ, ಅಧಿಕಾರದಲ್ಲಿ ಇಲ್ಲದ ಕ್ಷೇತ್ರಗಳಲ್ಲೂ ನಾವು ಗೆದ್ದಿದ್ದೇವೆ. ರಾಜ್ಯದಲ್ಲೂ ಎರಡು ವಿಧಾನಸಭೆ, ನಾಲ್ಕು ವಿಧಾನಪರಿಷತ್ ಸ್ಥಾನಗಳಲ್ಲೂ ಬಿಜೆಪಿ ಗೆದ್ದಿದೆ. ಸಮ್ಮಿಶ್ರ ಸರ್ಕಾರಗಳಿಂದ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಅವುಗಳು ಅಸ್ಥಿತ್ವಕ್ಕಾಗಿ ಪರದಾಡುತ್ತಿರುತ್ತವೆ. ಹೀಗಾಗಿ ಜನ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿಯನ್ನು ಗೆಲ್ಲಿಸುತ್ತಿದ್ದಾರೆ ಎಂದು ಹೇಳಿದರು.
TAGGED:
Love Jihad Controversy