ವಿರಾಜಪೇಟೆ/ಮಡಿಕೇರಿ: ಬೆಕ್ಕು ಮತ್ತು ನಾಯಿ ಪರಮ ಶತ್ರುಗಳು ಅಂತಾರೆ. ಆದರೆ ಇಲ್ಲೊಂದು ನಾಯಿಯು ಬೆಕ್ಕಿಗೆ ಹಾಲುಣಿಸಿ ತಾಯಿ ಪ್ರೀತಿಯನ್ನು ತೋರಿಸುತ್ತಿರುವ ಅಪರೂಪದ ಘಟನೆ ವಿರಾಜಪೇಟೆ ತಾಲೂಕಿನ ನೆಮ್ಮಲೆ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಪ್ರಾಣಿಗಳ ಅಪರೂಪದ ಬಾಂಧವ್ಯ: ದಿನನಿತ್ಯ ಬೆಕ್ಕಿಗೆ ಹಾಲುಣಿಸುತ್ತೆ ಈ ಶ್ವಾನ! ವಿಡಿಯೋ - ವಿರಾಜಪೇಟೆ ಬೆಕ್ಕಿಗೆ ಹಾಲುಣಿಸಿದ ನಾಯಿ ವಿಡಿಯೋ
ಮನುಷ್ಯರಿಗಿಂತಲೂ ಪ್ರಾಣಿಗಳು, ಮಮತೆ, ಪ್ರೀತಿ, ವಿಶ್ವಾಸದಲ್ಲಿ ಮೇಲು ಎಂಬ ಮಾತಿಗೆ ಅದೆಷ್ಟೋ ನಿದರ್ಶನಗಳಿವೆ. ಅದರಂತೆ ವಿರಾಜಪೇಟೆ ತಾಲೂಕಿನಲ್ಲಿ ಶ್ವಾನವೊಂದು ಬೆಕ್ಕಿಗೆ ಹಾಲುಣಿಸುವ ಅಪರೂಪದ ದೃಶ್ಯ ಬೆಳಕಿಗೆ ಬಂದಿದೆ.
ಬೆಕ್ಕಿನ ಮರಿಗಳಿಗೆ ಹಾಲುಣಿಸಿದ ಶ್ವಾನ
ಗ್ರಾಮದ ಚೆಟ್ಟಂಗಡ ಗಿಣಿ ತಿಮ್ಮಯ್ಯ ಅವರ ಮನೆಯಲ್ಲಿ ಈ ಅಪರೂಪದ ದೃಶ್ಯ ಕಂಡು ಬಂದಿದೆ. ಪ್ರತಿನಿತ್ಯ ಬೆಕ್ಕಿಗೆ ನಾಯಿ ಹಾಲುಣಿಸುತ್ತಿರುವುದು ವಿಶೇಷ.
ಬೆಕ್ಕಿಗೆ ತಾಯಿ ಪ್ರೀತಿ ತೋರಿಸುತ್ತಿರುವ ನಾಯಿಯ ಮಮತೆ ಅಪರೂಪವಾದದ್ದು. ಇವುಗಳ ಅನ್ಯೋನ್ಯತೆ ಕಂಡು ಮನೆಮಂದಿ ಹಾಗೂ ಸ್ಥಳೀಯರು ಅಚ್ಚರಿ ಜೊತೆ ಸಂತಸ ವ್ಯಕ್ತಪಡಿಸುತ್ತಾರೆ.