ಕೊಡಗು: ಜಿಲ್ಲೆಯಲ್ಲಿ ಮೊದಲ ಸೋಂಕು ತಗುಲಿದ ಪ್ರಕರಣ ಪತ್ತೆಯಾಗಿದ್ದು, ಜಿಲ್ಲಾಡಳಿತ ಸೋಂಕು ಪೀಡಿತ ವ್ಯಕ್ತಿ ಪ್ರಯಾಣ ಬೆಳೆಸಿದ್ದ ಮಾಹಿತಿ ಬಿಡುಗಡೆ ಮಾಡಿದೆ.
ಕೊರೊನಾ ಸೋಂಕಿತ ವ್ಯಕ್ತಿಯ ಇಲ್ಲೆಲ್ಲ ಓಡಾಡಿದ್ರು... ಮಾಹಿತಿ ನೀಡಿದ ಜಿಲ್ಲಾಡಳಿತ - ಕೊರೊನಾ ಸೋಂಕಿತ ವ್ಯಕ್ತಿಯ ಮಾಹಿತಿ ನೀಡಿದ ಜಿಲ್ಲಾಡಳಿತ
ಕೊಡಗು ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಪತ್ತೆಯಾಗಿದ್ದು, ಸೋಂಕು ತಗುಲಿದ ವ್ಯಕ್ತಿಯೂ ಪ್ರಯಾಣ ಮಾಡಿದ ಕುರಿತು ಜಿಲ್ಲಾಡಳಿತ ಮಾಹಿತಿ ನೀಡಿದೆ.
![ಕೊರೊನಾ ಸೋಂಕಿತ ವ್ಯಕ್ತಿಯ ಇಲ್ಲೆಲ್ಲ ಓಡಾಡಿದ್ರು... ಮಾಹಿತಿ ನೀಡಿದ ಜಿಲ್ಲಾಡಳಿತ Corona infected person travel information](https://etvbharatimages.akamaized.net/etvbharat/prod-images/768-512-6467800-thumbnail-3x2-hubli.jpg)
ಕೊರೊನಾ ಸೋಂಕಿತ ವ್ಯಕ್ತಿಯ ಪ್ರಯಾಣದ ಮಾಹಿತಿ ನೀಡಿದ ಜಿಲ್ಲಾಡಳಿತ
ಈ ಕುರಿತಂತೆ ಮಾಹಿತಿ ನೀಡಿರುವ ಜಿಲ್ಲಾಡಳಿತ, ಸೋಂಕಿತ ವ್ಯಕ್ತಿಯೂ ಮಾರ್ಚ್ 15 ರಂದು ದುಬೈನಿಂದ 6E96 ಸಂಖ್ಯೆಯ ಇಂಡಿಗೊ ವಿಮಾನದಲ್ಲಿ ನೇರವಾಗಿ ಬೆಂಗಳೂರಿಗೆ ಬಂದಿದ್ದರು. ಬಳಿಕ ಸ್ಯಾಟ್‌ಲೈಟ್ ಬಸ್ ನಿಲ್ದಾಣದಿಂದ ಕೆ.ಎ.19 ಎಫ್ 3170 ನೋಂದಣಿಯ ರಾಜಹಂಸ ಬಸ್ನಲ್ಲಿ ಕೊಡಗಿಗೆ ಪ್ರಯಾಣ ಬೆಳೆಸಿದ್ದು, ಅಲ್ಲಿಗೆ ತಲುಪಿದ ಅವರು ಆಟೋದಲ್ಲಿ ಪ್ರಯಾಣ ಮುಂದುವರೆಸಿದ್ದರು.
ಈ ವೇಳೆ ವ್ಯಕ್ತಿ ಹಲವರನ್ನು ಭೇಟಿಯಾಗಿರುವ ಸಾಧ್ಯತೆಗಳಿವೆ ಎಂದು ಸಂಶಯ ವ್ಯಕ್ತಪಡಿಸಿದೆ.
TAGGED:
kodagu latest news