ಕೊಡಗು : ಅಕ್ಟೋಬರ್ 17 ರಂದು ತಲಕಾವೇರಿಯಲ್ಲಿ ಬೆಳಿಗ್ಗೆ 7 ಗಂಟೆ 03 ನಿಮಿಷಕ್ಕೆ ತೀರ್ಥೋದ್ಭವ ಜರುಗಲಿದ್ದು ಈ ವೇಳೆ ಭಕ್ತರು ಕಲ್ಯಾಣಿಗೆ ಇಳಿಯುವಂತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಎಚ್ಚರಿಕೆ ನೀಡಿದ್ದಾರೆ.
ತಲಕಾವೇರಿ; ತೀರ್ಥೋದ್ಭವದ ನಂತರ ಭಕ್ತರು ಕಲ್ಯಾಣಿಗೆ ಇಳಿಯುವಂತಿಲ್ಲ
ತಲಕಾವೇರಿಯಲ್ಲಿ ತೀರ್ಥೋದ್ಭವ ಸಮಯದ ವೇಳೆ ಭಕ್ತರು ಕಲ್ಯಾಣಿಗೆ ಇಳಿಯುವಂತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸೂಚನೆ ನೀಡಿದ್ದಾರೆ.
ಕಾವೇರಿ ತೀರ್ಥೋದ್ಭವ ಹಿನ್ನೆಲೆಯಲ್ಲಿ ಅಲ್ಲಿ ಕೈಗೊಳ್ಳಬೇಕಾದ ಪೂರ್ವ ಸಿದ್ದತೆ ಕುರಿತು ಹಮ್ಮಿಕೊಂಡಿದ್ದ ಸಭೆಯ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಈಗಾಗಲೇ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟಸಾಲಿನ ಜಗಗಿರಿ ಬೆಟ್ಟ ಕುಸಿದಿರುವುದರಿಂದ ತಲಕಾವೇರಿಗೆ ದೊಡ್ಡ ವಾಹನಗಳಿಗೂ ಅವಕಾಶ ನೀಡುವುದಿಲ್ಲ.
ತೀರ್ಥೋದ್ಭವದ ಪೂಜಾ ವಿಧಿವಿಧಾನಗಳಿಗೆ ಯಾವುದೇ ಅಪಚಾರ ಆಗದಂತೆ ಸಾಂಕೇತಿಕವಾಗಿ ಪೂಜೆ ನೆರವೇರಿಸಲು ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ. ಹೊರ ಜಿಲ್ಲೆಯಿಂದ ತೀರ್ಥೋಧ್ಭವಕ್ಕೆ ಆಗಮಿಸುವ ಭಕ್ತರು ಕಡ್ಡಾಯವಾಗಿ ಕೊರೊನಾ ಇಲ್ಲ ಎನ್ನುವ ದೃಢೀಕರಣ ಪತ್ರವನ್ನು ತರಬೇಕು. ದಿನೇ ದಿನೆ ಕೊರೊನಾ ಸಂಖ್ಯೆ ಹೆಚ್ಚುತ್ತಿರುವುದರಿಂದ ತೀರ್ಥೋದ್ಭವಕ್ಕೆ ಮಕ್ಕಳು ವೃದ್ಧರು ಬರದೇ ಇರುವುದು ಒಳಿತು ಎಂದು ಸಲಹೆ ನೀಡಿದರು.