ಕೊಡಗು: ಭಾರತದಲ್ಲಿ ಶೇ. 8%ರಷ್ಟು ಮಾತ್ರ ಮೂಲ ನಿವಾಸಿಗಳಿದ್ದಾರೆ. ಉಳಿದವರೆಲ್ಲಾ ವಲಸೆ ಬಂದವರು ಎಂದು ಸಾಹಿತಿ ದೇವನೂರು ಮಹಾದೇವ ಹೇಳಿದ್ದಾರೆ.
ನಾವೇ ಆಯ್ಕೆ ಮಾಡಿದ ಪ್ರಧಾನಿ, ಪೌರತ್ವ ಸಾಬೀತುಪಡಿಸಲು ಕೇಳ್ತಿರುವ.. ಸಾಹಿತಿ ದೇವನೂರು ಕಿಡಿ - ದೇವನೂರು ಮಹಾದೇವ ಆಕ್ರೋಶ ಕೊಡಗು ನ್ಯೂಸ್
ಪೌರತ್ವ ತಿದ್ದುಪಡಿ ಕಾಯ್ದೆ ಬಂದರೆ ಅಲ್ಪಸಂಖ್ಯಾತರ ಸ್ಥಿತಿ ಏನು?. ಕಾಡಲ್ಲಿ ವಾಸಮಾಡುವ ನಿವಾಸಿಗಳು ದಾಖಲೆ ಕೊಡಲು ಹೇಗೆ ಸಾಧ್ಯ?. ನಾವು ಭಾರತೀಯರು ಶೇ. 99%ರಷ್ಟು ಇದ್ದೇವೆ. ಆದರೆ, ಕೋಮುವಾದಿಗಳು ಕೇವಲ ಶೇ.1%ರಷ್ಟಿದ್ದಾರೆ ಎಂದು ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ದೇವನೂರು ಮಹಾದೇವ
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇವನೂರು ಮಹಾದೇವ ಕಿಡಿ..
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸಿಎಎ ಹಾಗೂ ಎನ್‌ಆರ್‌ಸಿ ಕಾಯ್ದೆ ಖಂಡಿಸಿ ಮಡಿಕೇರಿಯ ಗಾಂಧಿ ಮೈದಾನದಲ್ಲಿ ಪ್ರಗತಿಪರ ಜನಾಂದೋಲನದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆ ಬಂದರೆ ಅಲ್ಪಸಂಖ್ಯಾತರ ಸ್ಥಿತಿ ಏನು?. ಕಾಡಲ್ಲಿ ವಾಸಮಾಡುವ ನಿವಾಸಿಗಳು ದಾಖಲೆ ಕೊಡಲು ಹೇಗೆ ಸಾಧ್ಯ?. ನಾವು ಭಾರತೀಯರು ಶೇ. 99%ರಷ್ಟು ಇದ್ದೇವೆ. ಆದರೆ, ಕೋಮುವಾದಿಗಳು ಕೇವಲ ಶೇ.1%ರಷ್ಟಿದ್ದಾರೆ ಎಂದು ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.