ಕೊಡಗು: ನೀನು ಸಸ್ಪೆಂಡ್ ಆಗಬೇಕಾ ಇಲ್ಲ, ಟ್ರಾನ್ಸ್ಫರ್ ಆಗ್ಬೇಕಾ ಹೇಳು? ಎಂದು ಕಂದಾಯ ಸಚಿವ ಆರ್. ವಿ.ದೇಶಪಾಂಡೆ ವಿರಾಜಪೇಟೆ ತಹಶೀಲ್ದಾರ್ ಗೋವಿಂದರಾಜು ಅವರನ್ನು ತರಾಟೆ ತೆಗೆದುಕೊಂಡರು.
ಜಿಲ್ಲಾಡಳಿತದ ವತಿಯಿಂದ ನಗರದ ಕೋಟೆ ಹಳೆ ವಿಧಾನಸಭಾ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಘಟನೆ ನಡೆಯಿತು.
ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಂದಾಯ ಸಚಿವ ಆರ್ ವಿ ದೇಶಪಾಂಡೆ ಜನಪ್ರತಿನಿಧಿಗಳ ಮಾತಿಗೆ ಮನ್ನಣೆ ನೀಡುವುದಿಲ್ಲ ಹಾಗೂ ಸಭೆಗಳಿಗೆ ಹಾಜರಾಗುತ್ತಿಲ್ಲವೆಂದು ಹೇಳಿದ ಕಂದಾಯ ಸಚಿವ ಆರ್ ವಿ ದೇಶಪಾಂಡೆ, ತಹಶೀಲ್ದಾರ್ ಗೋವಿಂದರಾಜು ಅವರ ವಿರುದ್ಧ ಫುಲ್ ಗರಂ ಆದರು.
ಈಗಾಗಲೇ ನಿನ್ನ ಬಗ್ಗೆ ಸ್ಥಳೀಯರು ಕೂಡ ಕಂಪ್ಲೇಟ್ ಕೊಟ್ಟಿದ್ದಾರೆ. ನೀನು ಸರಿಯಾಗಿ ಕೆಲಸ ಮಾಡಬೇಕು. ನಾನು ಎಷ್ಟು ಒಳ್ಳೆ ಮನುಷ್ಯನೋ ಅಷ್ಟೇ ಕೆಟ್ಟವನು ಎಂದು ಎಚ್ಚರಿಕೆ ನೀಡಿದರು.