ಕೊಡಗು: ದೇಶಾದ್ಯಂತ ಲಾಕ್‍ಡೌನ್ ಆದ ಹಿನ್ನೆಲೆ ಆಹಾರವಿಲ್ಲದೇ ಪರದಾಡುತ್ತಿರುವ ಬೀದಿ ನಾಯಿಗಳಿಗೆ ಯುವಕರ ತಂಡವೊಂದು ಆಹಾರ ನೀಡಿ ಮಾನವೀಯತೆ ಮೆರೆದಿದ್ದಾರೆ.
ಹಸಿವಿನಿಂದ ನರಳಾಡುತ್ತಿದ್ದ ಬೀದಿ ನಾಯಿಗಳಿಗೆ ಆಹಾರ ಕೊಟ್ಟ ಯುವಕರು! - ಕೊರೊನಾ ಭೀತಿ
ಕೊಡಗು ಜಿಲ್ಲೆ ಮಡಿಕೇರಿಯಲ್ಲಿ ಆಹಾರವಿಲ್ಲದೇ ನರಳಾಡುತ್ತಿದ್ದ ಮೂಕ ಪ್ರಾಣಿಗೆ ಆಹಾರ ನೀಡಿದ ಯುವಕರು ಸ್ಥಳೀಯರ ಮೆಚ್ಚುಗೆ ಪಡೆದಿದ್ದಾರೆ.
ಬೀದಿ ನಾಯಿಗಳಿಗೆ ಆಹಾರ ವಿತರಿಸಿದ ಯುವಕರು..!
ನಗರದ ಕಲೀಲ್, ಶೈನ್ಷಾ ಮತ್ತು ಸಾಜಿದ್ ಎಂಬುವವರು ಬೀದಿ ನಾಯಿಗಳಿಗೆ ಊಟ ನೀಡಿದ್ದು, ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ವಾರದಿಂದ ಅಂಗಡಿ-ಮುಂಗಟ್ಟುಗಳು ಹಾಗೂ ಹೋಟೆಲ್‌ಗಳು ತೆರೆಯದ ಕಾರಣ ಮೂಕ ಪ್ರಾಣಿಗಳು ಆಹಾರವಿಲ್ಲದೇ ಪರದಾಡುವುದನ್ನು ನೋಡಿದ ಯುವಕರು, ಆಹಾರ ನೀಡಿದ್ದಾರೆ.